Breaking News

ರೈತರಿಗೆ ಮೇವು ಕತ್ತರಿಸುವ ಎರಡು ಯಂತ್ರಗಳನ್ನು ವಿತರಣೆ

ನವಲಗುಂದ : ರೈತರನ್ನು ವೃಥಾ ಅಲೆದಾಡಿಸದೇ ಅಧಿಕಾರಿಗಳು ರೈತ ಸಮುದಾಯಕ್ಕೆ ಸ್ಪಂದಿಸಬೇಕು. ರೈತರಿಗೆ ಕಾಲ-ಕಾಲಕ್ಕೆ ಸರ್ಕಾರದಿಂದ ಬರುವ ಸೌಲಭ್ಯಗಳ ಕುರಿತು ಪ್ರಾಮಾಣಿಕವಾಗಿ ಮಾಹಿತಿ ಮುಟ್ಟಿಸಬೇಕು ಎಂದು ಶಾಸಕ ಎನ್.ಎಚ್‌.ಕೋನರಡ್ಡಿ ಹೇಳಿದರು.

ಪಟ್ಟಣದ ಪಶು ಆಸ್ಪತ್ರೆಯಲ್ಲಿ ಪಶುಪಾಲನಾ ಇಲಾಖೆ ವತಿಯಿಂದ ರೈತರಿಗೆ ಮೇವು ಕತ್ತರಿಸುವ ಎರಡು ಯಂತ್ರಗಳನ್ನು ವಿತರಿಸಿ ಮಾತನಾಡಿದ ಅವರು ಹೈನುಗಾರಿಕೆ ರೈತರಿಗೆ ಒಂದು ವರದಾನವಾಗಿದ್ದು, ಕೃಷಿ ಜೊತೆಗೆ ಹೈನುಗಾರಿಕೆಯನ್ನು ಕೂಡ ರೈತರು ಅಳವಡಿಸಿಕೊಳ್ಳಬೇಕು ಎಂದರು.

ಪಶು ವೈದ್ಯಾಧಿಕಾರಿ ಮನೋಹರ ದ್ಯಾಬೇರಿ ಮಾತನಾಡಿ, ರೈತರಿಗೆ ಸಹಾಯವಾಗಲೆಂದು ಮೇವು ಕತ್ತರಿಸುವ ಯಂತ್ರ ಒಂದಕ್ಕೆ 33 ಸಾವಿರ ಇದ್ದು, ಪಶು ಇಲಾಖೆ ವತಿಯಿಂದ ಶೇ. 50 ರ ರಿಯಾಯಿತಿ ದರದಲ್ಲಿ ಪೂರೈಕೆ ಮಾಡಲಾಗುತ್ತಿದೆ.

ಫಲಾನುಭವಿ ರೈತರು 16500 ರೂ. ಪಾವತಿ ಮಾಡಬೇಕಾಗುತ್ತದೆ. ಉಳಿದ ಹಣವನ್ನು ಸರ್ಕಾರವೇ ಅರ್ಧದಷ್ಟು ಭರಿಸುತ್ತದೆ ಈ ಯಂತ್ರಗಳಿಂದ ಪ್ರತಿ ಗಂಟೆಗೆ 300 ರಿಂದ 350 ಕೆ ಜಿ ಕಟಾವು ಮಾಡಬಹುದು ಇನ್ನುಳಿದ ಯಾವುದೇ ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

Share News

About Shaikh BigTv

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *