ಪುಣೆಯ ಶನಿವಾರ ಪೇಠ್ ಪ್ರದೇಶದಲ್ಲಿ ₹2.5 ಲಕ್ಷ ಸಾಲ ತೀರಿಸಲಾಗದೆ ಸಿವಿಲ್ ಸರ್ವಿಸಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 28 ವರ್ಷದ ಪ್ರಥಮೇಶ್ ದೇಶಮುಖ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಸಾಲದ ವಿವರ ಹಾಗೂ 19 ಮಂದಿಯ ಹೆಸರುಗಳಿದ್ದ ಎರಡು ಪುಟಗಳ ಪತ್ರ ಪತ್ತೆಯಾಗಿದೆ. ಧಾರಾಶಿವ್ ಜಿಲ್ಲೆಯ ಪ್ರಥಮೇಶ್, ಕಳೆದ 8 ತಿಂಗಳಿಂದ ಪುಣೆಯಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ವಾಸಿಸುತ್ತಿದ್ದು MPSC ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಸಾಲ ಮಾಡಿದ್ದೇಕೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. MPSC ಪರೀಕ್ಷೆಗಳಲ್ಲಿನ ವಿಳಂಬ, ಅಕ್ರಮ ಮತ್ತು ಅನಿಶ್ಚಿತತೆಯ ವಿರುದ್ಧ ಅಭ್ಯರ್ಥಿಗಳ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೇ ಘಟನೆ ನಡೆದಿದೆ. ವಿದ್ಯಾರ್ಥಿಗಳ ಮೇಲಿನ ಒತ್ತಡಕ್ಕೆ ಸರ್ಕಾರ ಹೊಣೆಗಾರಿಕೆ ವಹಿಸಬೇಕು ಎಂದು ಸಿಜೆಪಿ ಆಗ್ರಹಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

