Breaking News

ಅಕ್ರಮವಾಗಿ ಸಂಗ್ರಹಿಸಿದ್ದ 101 ಚೀಲ ಪಡಿತರ ರಾಗಿ ವಶ

ಮಧುಗಿರಿ: ಪಟ್ಟಣದ ಬೆಂಕಿಪುರದ 8ನೇ ವಾರ್ಡ್‌ನ ಆಂಜನೇಯ ದೇವಸ್ಥಾನದ ಪಕ್ಕದಲ್ಲಿನ ಕಟ್ಟಡದ ಮೇಲೆ ಬುಧವಾರ ದಾಳಿ ನಡೆಸಿದ ತಹಶೀಲ್ದಾರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು 101 ಚೀಲ ಪಡಿತರ ರಾಗಿ ವಶಪಡಿಸಿಕೊಂಡು ದೂರು ದಾಖಲಿಸಿದ್ದಾರೆ.ಪಡಿತರ ರಾಗಿ ಖರೀದಿಸಿ ಅಕ್ರಮವಾಗಿ ಸಂಗ್ರಹಿಸಿರುವ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಪರಿಶೀಲಿಸಿದ್ದಾರೆ.ಸ್ಥಳದಲ್ಲಿದ್ದ ಟೆಂಪೊ ಚಾಲಕನಿಂದ ಮಾಹಿತಿ ಪಡೆದ ತಹಶೀಲ್ದಾರ್ ಶ್ರೀನಿವಾಸ್, ಆಹಾರ ಶಿರಸ್ತೇದಾರ್ ಶೈಲಜಾ ಮತ್ತು ಆಹಾರ ನಿರೀಕ್ಷಕ ನಸ್ರುದ್ದೀನ್ ಅವರು ರಾಕೇಶ್ ಹಾಗೂ ಟೆಂಪೊ ಚಾಲಕ ಗಿರೀಶ್ ವಿರುದ್ಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Share News

About BigTv News

Check Also

ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ಜಗಳ; ಚಿಕ್ಕಪ್ಪನಿಗೆ ಚಾಕು ಇರಿತ!

ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ …

Leave a Reply

Your email address will not be published. Required fields are marked *