Breaking News

ಜಗಳೂರು ಪಟ್ಟಣದಲ್ಲಿ ಮಳೆಗಾಗಿ ದೇವರ ಸಂತೆ

ದಾವಣಗೆರೆ : ಕಳೆದ ಹಲವು ವರ್ಷಗಳಿಂದ ಮಳೆಯಿಲ್ಲದೆ ರೈತರು ಕಷ್ಟವನ್ನು ಅನುಭವಿಸುತ್ತಿದ್ದು, ಉತ್ತಮ ಮಳೆಯಾಗಲೆಂದು ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ದೇವರ ಸಂತೆ ಮಾಡಲಾಯಿತು. ಪಟ್ಟಣದ ದೊಡ್ಡ ಮಾರಿಕಾಂಬಾ ದೇವಸ್ಥಾನದ ಮುಂಭಾಗ ಪೂಜೆ‌ ಸಲ್ಲಿಸಿ ಸಂತೆ ನಡೆಸಿದ್ರು… ಮೂರು ವಾರ ಸಂತೆ ದೇವಸ್ಥಾನದ ಮುಂಭಾಗ ಮಾಡಿದ್ರೆ ಮಳೆ ಬರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ.. ಅದ್ದರಿಂದ ಕಳೆದ ಹಲವು ವರ್ಷಗಳಿಂದ ಉತ್ತಮ‌ ಮಳೆಯಾಗದೇ ರೈತರು ಕಷ್ಟದಲ್ಲಿದ್ದು, ಈ ಬಾರಿ ಮಳೆಯಾದ್ರೆ ಫಸಲು ಕೈ ಸೇರುತ್ತದೆ ಎನ್ನುವ ನಿಟ್ಟಿನಲ್ಲಿ ಮೂಡ ನಂಬಿಕೆಯ ಹಿಂದೆ ಬಿದ್ದಿದ್ದಾರೆ… ಪ್ರತಿ ಶನಿವಾರ ಸಂತೆ ಮೈದಾನದಲ್ಲಿ ನಡೆಯಬೇಕಿದ್ದ ಸಂತೆ ಈ ವಾರದಿಂದ ದೊಡ್ಡ ಮಾರಿಕಾಂಬಾ ದೇವಸ್ಥಾನದ ಮುಂಭಾಗ ಮಾಡಲಾಯುತು… ಒಟ್ಟಿನಲ್ಲಿ ಅನಾದಿಕಾಲದಿಂದಲೂ ದೇವಸ್ಥಾನದ ‌ಮುಂಭಾಗ ಸಂತೆ ನಡೆಸಿದ್ರೆ ಮಳೆ ಬರುತ್ತೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ‌..

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *