Breaking News

ಧಾರವಾಡ | ಕಳ್ಳರ ಬಂಧನ; 9 ಬೈಕ್‌ ವಶ

ಧಾರವಾಡ: ಬೈಕ್‌ ಕಳ್ಳರಿಬ್ಬರನ್ನು ಬಂಧಿಸಿ ಒಂಬತ್ತು ಬೈಕ್‌ಗಳನ್ನು (₹ 3.65 ಲಕ್ಷ ಮೌಲ್ಯ) ಪೊಲೀಸರು ವಶಪಡಿಸಿಕೊಂಡಿದ್ದಾರೆ.ಹುಬ್ಬಳ್ಳಿಯ ಹೂವಪ್ಪ (49) ಹಾಗೂ ಪುಂಡಲೀಕ (43) ಬಂಧಿತರು. ಉಪನಗರ ಠಾಣೆಯ ಪೊಲೀಸರು ಕಾರ್ಯಚರಣೆ ನಡೆಸಿ ಕಳ್ಳರನ್ನು ಹಿಡಿದಿದ್ದಾರೆ.ಧಾರವಾಡ, ಹುಬ್ಬಳ್ಳಿ, ಹಾವೇರಿ, ಗೋವಾ ಸಹಿತ ವಿವಿಧೆಡೆ ಕದ್ದಿದ್ದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ‘ಬೈಕ್‌ಗಳನ್ನು ಕದ್ದು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದರು. ರಸ್ತೆ ಬದಿ ನಿಂತಿದ್ದ ಬೈಕ್‌ ಕದಿಯುವ ಚಾಲಾಕಿತನ ರೂಢಿಸಿಕೊಂಡಿದ್ದರು. ನಗರದ ಜರ್ಮನ್‌ ಆಸ್ಪತ್ರೆ ವೃತ್ತದಲ್ಲಿ ಸಾಗುವಾಗ ಸಿಕ್ಕಿಬಿದ್ದರು’ ಎಂದು ಪೊಲೀಸರು ತಿಳಿಸಿದರು.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *