Breaking News

ಕುಮಟಾ: ಬೈಕ್ ಹಿಂದೆ ಕುಳಿತ ಯುವಕ ನಿಯಂತ್ರಣ ತಪ್ಪಿ ಬಿದ್ದು ಸಾವು

ಪಟ್ಟಣದ ಮಹಾಸತಿ ದೇವಾಲಯ ಬಳಿ ರಾಷ್ಟ್ರೀ ಯ ಹೆದ್ದಾರಿಯಲ್ಲಿ ಶುಕ್ರವಾರ ಬೈಕ್ ಹಿಂದೆ ಕುಳಿತ ಯುವಕ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ತಾಲ್ಲೂಕಿನ ಹೊಲನಗದ್ದೆಯ ಶಿಲ್ಪಿ ಕಿರಣ ಪಟಗಾರ (23) ಮೃತ. ಈತ ಶುಕ್ರವಾರ ರಾತ್ರಿ ತಾಲ್ಲೂಕಿನ ಮಿರ್ಜಾನಿನಿಂದ ತನ್ನ ಸ್ನೇಹಿತ ವಿಕಾಸ ಪಟಗಾರ (19) ಜೊತೆಗೆ ಬೈಕ್‌ನಲ್ಲಿ ಹೊರಟಿರುವಾಗ ಕಿರಣ ಬಿದ್ದಿದ್ದಾರೆ.ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಿ.ಎಸ್.ಐ ರವಿ ಗುಡ್ಡಿ ಮಾಹಿತಿ ನೀಡಿದ್ದಾರೆ. ಪಟ್ಟಣದ ಸರೋವರ ಫ್ಯಾಮಿಲಿ ರೆಸ್ಟೊರೆಂಟ್‌ನ ಸುಮಾರು 10 ಅಡಿ ಅಗಲ 55 ಅಡಿ ಆಳದ 15 ಅಡಿ ನೀರು ಇದ್ದ ತೆರೆದ ಬಾವಿಯಲ್ಲಿ ಇಳಿದು ಪಂಪ್ ಮೇಲೆತ್ತುವಾಗ ಅಸ್ವಸ್ಥಗೊಂಡ ಆರುಣ ನಾಯಕ (62) ಎನ್ನುವ ವ್ಯಕ್ತಿಯನ್ನು ಸ್ಥಳೀಯ ಅಗ್ನಿಶಾಮಕ ದಳ ಸಿಬ್ಬಂದಿ ತಂಡ ರಕ್ಷಿಸಿದೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ಟಿ.ಎನ್. ಗೌಡ ತಿಳಿಸಿದ್ದಾರೆ.

Share News

About BigTv News

Check Also

ವಿಜಯನಗರ : ಕ್ಷುಲ್ಲಕ ಕಾರಣಕ್ಕೆ ಗಲಾಟೆ – ರುಬ್ಬುಗುಂಡಿನ ಕಲ್ಲಿನಿಂದ ಹೊಡೆದು ಯುವಕನ ಭೀಕರ ಕೊಲೆ

ಹೊಸಪೇಟೆ: ನಗರದ ಸಿದ್ದಲಿಂಗಪ್ಪ ಚೌಕಿಯ 4ನೇ ಕ್ರಾಸ್‌ನ ಎಲ್ಲಮ್ಮ ದೇವಸ್ಥಾನದ ಬಳಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ …

Leave a Reply

Your email address will not be published. Required fields are marked *