Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಲವ್​ ಫೇಲ್ಯೂರ್​ನಿಂದ​ ಆಗಿರೋ ಕೋಪವನ್ನು ಇದು ಕಡಿಮೆ ಮಾಡುತ್ತೆ!

ಲಂಡನ್​​: ವ್ಯಾಲೆಂಟೈನ್ಸ್ ಡೇ ಬಂತೆಂದ್ರೆ ಪ್ರೇಮಿಗಳಿಗೆ ದೊಡ್ಡ ಹಬ್ಬದಷ್ಟೇ ಸಂಭ್ರಮ. ಅಂದು ತಮ್ಮ ಪ್ರೀತಿಯನ್ನು ಮೊದಲ ಬಾರಿಗೆ ನಿವೇದನೆ ಮಾಡಿಕೊಳ್ಳುವ ಹುಡುಗ-ಹುಡುಗಿಯರು ಪ್ರೊಪೋಸಲ್​​ ಸಕ್ಸಸ್​​ ಆದ್ರೆ ಅಂತೂ ಸ್ವರ್ಗವೇ ಕೈಗೆ ಸಿಕ್ಕಿದಷ್ಟು ಖುಷಿಯಲ್ಲಿರುತ್ತಾರೆ. ಆದ್ರೆ ಈ ಸಂತೋಷಗಳೆಲ್ಲದರ ಮಧ್ಯೆ ಕೆಲ ದೇವದಾಸ್​​ ಪ್ರೇಮಿಗಳು ಸಹ ಇರ್ತಾರೆ. ತಮ್ಮನ್ನು ಬಿಟ್ಟು ಹೋದ ಅಥವಾ ಮೋಸ ಮಾಡಿ ಕೈಕೊಟ್ಟು ಹೋದ ಗೆಳೆಯ-ಗೆಳತಿಯರ ನೆನಪಿನಲ್ಲಿ ಎಣ್ಣೆ ಹೊಡೆಯುತ್ತಾ ಫ್ಯಾಥೋ ಸಾಂಗ್​ವೊಂದನ್ನ​ ಕೇಳುತ್ತಾ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್​ ಮಾಡ್ತಾರೆ. ಇಂಥವರಿಗೆ ಅಂತಾನೆ ಲಂಡನ್​ನ ಝೂ ಒಂದು ವಿಶೇಷ ಅವಕಾಶ ನೀಡಿದೆ.ಬಿಟ್ಟು ಹೋದ ಅಥವಾ ಪ್ರೀತಿ ನಿರಾಕರಿಸಿದ ಪ್ರೇಮಿಯ ನೆನಪಲ್ಲಿ ಕೂರುವ ಬದಲು ಅದಕ್ಕೊಂದು ಸ್ವೀಟ್​ ರಿವೆಂಜ್​ ತೆಗೆದುಕೊಳ್ಳುವ ಅವಕಾಶವನ್ನ ಈ ಝೂ ದೇವದಾಸ್​​​ ಪ್ರೇಮಿಗಳಿಗೆ ನೀಡ್ತಿದೆ. ಈ ಝೂನಲ್ಲಿ ಪ್ರೀತಿಯಲ್ಲಿ ಮೋಸ ಹೋದವರು ತಮ್ಮ ಎಕ್ಸ್​​ ಗರ್ಲ್​ಫೆಂಡ್​ ಅಥವಾ ಬಾಯ್​ಫ್ರೆಂಡ್​ಗಳ ಹೆಸರನ್ನ ಅಲ್ಲಿರುವ ಜಿರಳೆಗಳಿಗೆ ನಾಮಕರಣ ಮಾಡುವ ಮೂಲಕ ಪ್ರೀತಿಯಲ್ಲಿ ತಮಗಾದ ಕಹಿ ನೆನಪನ್ನ ಮರೆಯಬಹುದಂತೆ. ಇನ್ನು ಜಿರಳೆಗಳಿಗೆ ನಾಮಕರಣಮಾಡುವುದಕ್ಕಾಗಿ ಝೂ 1.50 ಪೌಂಡ್​ ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ ₹140 ರೂಪಾಯಿ ದರ ನಿಗದಿಪಡಿಸಿದೆ. ದೇವದಾಸ್​ ಪ್ರೇಮಿಗಳು ಈ ಮೂಲಕ ಮೋಸ ಮಾಡಿ ಹೋದವರ ಹೆಸರನ್ನ ಜಿರಳೆಗಳಿಗೆ ಇಟ್ಟು ಕೊಂಚ ಸಮಾಧಾನ ಪಟ್ಟುಕೊಳ್ಳಬಹುದಂತೆ. ಆದ್ರೆ ಇದು ಎಷ್ಟು ಸಕ್ಸಸ್‌ ಆಗುತ್ತೆ ಅಂತಾ ಕಾದು ನೋಡಬೇಕಿದೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *