Breaking News

ಕನಕಪುರ: ನಾಡ ಬಾಂಬ್ ತಿಂದು ಹಸುವಿನ ಬಾಯಿ ಛಿದ್ರ

ಕನಕಪುರ: ತಾಲೂಕಿನ ಸೋಮೆಂದ್ಯಾಪನಹಳ್ಳಿಯಲ್ಲಿ ಸೋಮವಾರ ಹಸುವೊಂದು ನಾಡಬಾಂಬ್ ಸೇವಿಸಿದ್ದರಿಂದ ಅದರ ಬಾಯಿ ಛಿದ್ರಗೊಂಡಿದೆ. ರೈತ ಕಾಳಲಿಂಗೇಗೌಡ ಅವರ ಹಸುವಿಗೆ ಗಂಭೀರ ಗಾಯವಾಗಿದೆ ಮತ್ತು ಅದು ಗರ್ಭಿಣಿಯಾಗಿತ್ತು ಎಂದು ಪಶು ವೈದ್ಯರು ತಿಳಿಸಿದ್ದಾರೆ. ಹಸು ಮತ್ತು ಅದರ ಕರು ಎರಡನ್ನೂ ಉಳಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಕಾಡು ಹಂದಿ ಬೇಟೆಗಾಗಿ ಜಮೀನಿನಲ್ಲಿ ಇಡಲಾಗಿದ್ದ ಬಾಂಬ್ ಈ ಘಟನೆಗೆ ಕಾರಣ ಎನ್ನಲಾಗಿದೆ. ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿ, ಆರೋಪಿಗಳನ್ನು ಪತ್ತೆಹಚ್ಚಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸಾತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಇದೇ ರೀತಿ ಘಟನೆಗಳು ಪದೇ ಪದೇ ನಡೆಯುತ್ತಿರುವುದಕ್ಕೆ ಪೊಲೀಸರು ಗಂಭೀರ ಕ್ರಮ ಕೈಗೊಳ್ಳದಿರುವುದೇ ಕಾರಣ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *