Breaking News

ಕೋಟೆನಾಡಿನಲ್ಲಿ ಯುವಕನ ಮೇಲೆ ಬ್ಲೇಡ್ ದಾಳಿ

ಕೋಟೆ ನಾಡು ಚಿತ್ರದುರ್ಗದಲ್ಲಿ ದುಶ್ಚಟ ವ್ಯಸನಿಗಳ ಕಾಟ ಹೆಚ್ಚಾಗಿದ್ದು, ಪುಂಡರ ಬ್ಲೇಡ್ ದಾಳಿಗೆ ಸಿಲುಕಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿತ್ರದುರ್ಗದ ಜೆಸಿಆರ್ ಬಡಾವಣೆಯಲ್ಲಿ ಸಲ್ಯೂಷನ್ ವ್ಯಸನಿಗಳ ಆರು ಮಂದಿ ತಂಡ ಬಡೇಮಕಾನ್ ನಿವಾಸಿ ಕರೀಂ ಎಂಬ ಯುವಕನ ಮೇಲೆ ಬ್ಲೇಡ್ ನಿಂದ ದಾಳಿಮಾಡಿ, ಮೂರು ಸಾವಿರ ರೂಪಾಯಿ ನಗದು ಹಾಗು ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾರೆ. ದುಶ್ಚಟ ವ್ಯಸನಿಗಳ ದಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿರುವ ಯುವಕ ಕರೀಂ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Share News

About admin

Check Also

ಬೈಕ್ ಡಿಕ್ಕಿ ಸ್ಥಳದಲ್ಲಿ ನಾಲ್ವರ ಯುವಕರ ಸಾವು!

ಹಾಬಳ ಗ್ರಾಮದಿಂದ ಬರುತ್ತಿದ್ದ ಬೈಕ್ ಗೆಸೇಡಮ್ ಕಡೆಯಿಂದ ಹೊರಟಿದ್ದ ಬೈಕ್ ಇಂದ್ ಅತೀ ವೇಗದಿಂದ ಬಂದು ಗುದ್ದಿದೆ. ಅಪಘಾತದ ತೀವ್ರತೆಗೆ …

Leave a Reply

Your email address will not be published. Required fields are marked *