ಆಂಧ್ರಪ್ರದೇಶದ ಕಾಕಿನಾಡದಲ್ಲಿ ಎರಡು ಟ್ರಕ್ಗಳ ನಡುವೆ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಸಜೀವದಹನವಾಗಿದ್ದಾರೆ. ಕತಿಪುಡಿ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಹೆಚ್ಚು ವಾಹನಗಳು ಓಡಾಡುವ ಹೆದ್ದಾರಿ, ಪಕ್ಕದ ರಸ್ತೆಯಿಂದ ಟ್ರಕ್ ಒಂದು ಯೂಟರ್ನ್ ತೆಗೆದುಕೊಳ್ಳುವಾಗ ಈ ಅಪಘಾತ ಸಂಭವಿಸಿದೆ. ಎರಡೂ ವಾಹನಗಳು ಡಿಕ್ಕಿ ಹೊಡೆದ ತಕ್ಷಣ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಹರಡುವ ಮೊದಲೇ ಓರ್ವ ಚಾಲಕ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರು. ಆದರೆ ಮತ್ತೊಂದು ಟ್ರಕ್ನಲ್ಲಿದ್ದ ಚಾಲಕನಿಗೆ ಅದು ಸಾಧ್ಯವಾಗಲಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

