Breaking News

ಪತಿ, ಸಹೋದರ ಮಾವ ಆತ್ಮಹತ್ಯೆ: ಮದ್ವೆಯಾಗಿ 45 ದಿನಕ್ಕೆ ಬೇರೊಬ್ಬನೊಂದಿಗೆ ಓಡಿಹೋಗಿದ್ದ ಮಹಿಳೆ ಅರೆಸ್ಟ್

ದಾವಣಗೆರೆ: ಪತ್ನಿ ಬೇರೊಬ್ಬನ ಜೊತೆ‌ ಪರಾರಿ ಹಿನ್ನೆಲೆ ಪತಿ ಮತ್ತು ಸಹೋದರ ಮಾವ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರೇಮಿ ಶಿವಕುಮಾರ ಹಾಗೂ ಸರಸ್ವತಿ ವಿರುದ್ಧ ಎಫ್​ಐಆರ್​​ ದಾಖಲಾಗಿದೆ. ಆರೋಪಿ ಪತ್ನಿ ಸರಸ್ವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರಗಾಗಿ ಶೋಧ ನಡೆದಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್​​ಪಿ ಉಮಾ ಪ್ರಶಾಂತ್​, ಪ್ರೀತಿಸಿದ ಯುವಕನೊಂದಿಗೆ ಓಡಿ ಹೋಗಿದ್ದ ಸರಸ್ವತಿ ಮದುವೆಗೂ ಮೊದಲೇ ಆರೋಪಿ ಶಿವಕುಮಾರನನ್ನ ಪ್ರೀತಿಸುತ್ತಿದ್ದಳು. ಜನವರಿ 23ರಂದು ಗುಮ್ಮನೂರ ಗ್ರಾಮದಿಂದ ತನ್ನ ಪ್ರಿಯತಮನ ಜೊತೆಗೆ ಹೋಗಿದ್ದಳು. ಇದೇ ಕಾರಣಕ್ಕೆ ಬೇಸತ್ತು ಆಕೆಯ ಪತಿ ಮತ್ತು ಸಹೋದರ ಮಾವ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಶರಣಾದ ಇಬ್ಬರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರಿಂದ ಅಟ್ರಾಸಿಟಿ ಕೇಸ್ ಕೂಡ ಆರೋಪಿ ಶಿವಕುಮಾರ ವಿರುದ್ಧ ದಾಖಲಾಗಿದೆ ಎಂದರು.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *