Breaking News

ವಾರದಲ್ಲೇ ಎರಡೂ ಬಂದ್ ರಾಜ್ಯಕ್ಕೆ ಕೋಟಿ ಕೋಟಿ ನಷ್ಟ…

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಸೆಪ್ಟೆಂಬರ್‌ 26 ಬೆಂಗಳೂರು ಬಂದ್‌ ಹಾಗೂ ಸೆಪ್ಟೆಂಬರ್‌ 29 ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು. ಹೀಗೆ ಒಂದೇ ವಾರದಲ್ಲಿ ಎರಡು ಬಾರಿ ಬಂದ್‌ಗೆ ಕರೆ ನೀಡಲಾಗಿದ್ದು, ಇದರಿಂದ ರಾಜ್ಯಕ್ಕೆ ಕೋಟಿ ಕೋಟಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.ಯಾವುದೇ ಸರ್ಕಾರ ಬಂದರೂ ಕೂಡ ಇಲ್ಲಿಯವರೆಗೂ ಕಾವೇರಿ ನೀರಿನ ವಿವಾದವನ್ನು ಬಗೆಹರಿಸುತ್ತಿಲ್ಲ. ಬದಲಾಗಿ ರೈತರು, ಜನಸಾಮಾನ್ಯರು ರಸ್ತೆಗೆ ಇಳಿದು ಹೋರಾಟ ಮಾಡುವಂತೆ ಆಗಿದೆ. ಇದರಿಂದ ನಮ್ಮ ರಾಜ್ಯಕ್ಕೆ ತುಂಬಾ ನಷ್ಟ ಆಗುತ್ತಿದೆ. ಆ ನಷ್ಟವಾಗುವ ಹಣ ಕೂಡ ನಮ್ಮ ಹಣವೇ ಆಗಿರುತ್ತದೆ. ಆದರೆ ಇದನ್ನೆಲ್ಲ ಗಮನಿಸದೇ ರಾಜ್ಯದ ಎಲ್ಲಾ ಪಕ್ಷಗಳ ರಾಜಕಾರಣಿಗಳು ಬರೀ ಅವರವರ ರಾಜಕೀಯ ಬೇಳೆ ಬೀಯಿಸಿಕೊಳ್ಳುತ್ತಿದ್ದಾರೆ ಎಂದು ಜನರು ಕಿಡಿಕಾರುತ್ತಿದ್ದಾರೆ.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *