Breaking News

‘ಖಾಸಗಿ ವಿಡಿಯೋ’ ಬೆದರಿಕೆಯೊಡ್ಡಿದ್ದವಗೆ ಕೇಸ್

ಹುಬ್ಬಳ್ಳಿ: ಅಪ್ರಾಪ್ತೆಗೆ ಪ್ರೀತಿಸುವಂತೆ ಒತ್ತಾಯಿಸಿದ್ದಲ್ಲದೆ ಖಾಸಗಿ ವಿಡಿಯೋ ಮೂಲಕ ಬೆದರಿಕೆಯೊಡಿದ್ದ ಗೋವಾ ಮೂಲದ ಯುವಕನ ವಿರುದ್ಧ ಇಲ್ಲಿಯ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.ತಮ್ಮ ಪಾಲಕರೊಂದಿಗೆ 2022ರಲ್ಲಿ ಗೋವಾಕ್ಕೆ ತೆರಳಿ ಬಾಲಕಿ ವಾಸವಾಗಿದ್ದಳು. ಈ ವೇಳೆ ತನ್ನ ಮನೆ ಪಕ್ಕದಲ್ಲಿ ವಾಸಿಸುತ್ತಿದ್ದ ಯುವಕನಿಗೆ ಪರಿಚಯವಾಗಿದ್ದಳು. ಈ ವೇಳೆ ಬಾಲಕಿಗೆ ತನ್ನನ್ನು ಪ್ರೀತಿಸುವಂತೆ ಯುವಕ ಒತ್ತಾಯಿಸಿದ್ದ. ಬಾಲಕಿ ನಿರಾಕರಿಸಿ, ಮರಳಿ ಹುಬ್ಬಳ್ಳಿಗೆ ಬಂದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಯ ಖಾಸಗಿ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಬಾಲಕಿಯ ಪಾಲಕರು ಯುವಕನ ವಿರುದ್ಧ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *