Breaking News

4 ಲಕ್ಷ ಲಂಚಕ್ಕೆ ಬೇಡಿಕೆ ಪ್ರಕರಣ : ಇನ್ಸ್ಪೆಕ್ಟರ್ ಗೋವಿಂದರಾಜು ಸಸ್ಪೆಂಡ್, ತನಿಖೆಗೆ ಕಮಿಷನರ್ ಆದೇಶ

ಬೆಂಗಳೂರು : ಲೋಕಾಯುಕ್ತ ಪೊಲೀಸರಿಂದ ಪಿ.ಐ ಗೋವಿಂದರಾಜು ಟ್ರ್ಯಾಕ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೆಪಿ ಅಗ್ರಹಾರ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜನನ್ನು ಅಮಾನತು ಮಾಡಲಾಗಿದೆ. ಪಿ ಐ ಗೋವಿಂದರಾಜು ಅಮಾನತು ಮಾಡಿ ಇಲಖಾ ತನಿಖೆಗೆ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಲಾಗಿದೆ.ಪ್ರಕರಣ ಸಂಬಂಧಪಟ್ಟ ಗೋವಿಂದರಾಜ ಮತ್ತು ದೂರುದಾರನ ಆಡಿಯೋ ವೈರಲ್ ಆಗಿತ್ತು. ಚೀಟಿ ವ್ಯವಹಾರ ಪ್ರಕರಣ ಸಂಬಂಧ ನಾಲ್ಕು ಲಕ್ಷ ರೂಪಾಯಿ ಈ ಲಂಚಕ್ಕೆ ಕೆ ಪಿ ಅಗ್ರಹಾರ ಠಾಣೆ ಇನ್ಸ್ಪೆಕ್ಟರ್ ಗೋವಿಂದರಾಜು ಡಿಮ್ಯಾಂಡ್ ಮಾಡಿದ್ದ. ಈ ಕುರಿತು ಆಡಿಯೋದಲ್ಲಿ ಹಿರಿಯ ಅಧಿಕಾರಿಗಳ ಹೆಸರುಗಳನ್ನು ಗೋವಿಂದರಾಜು ಹೇಳಿದ್ದ. ಲಂಚ ಪಡೆಯಲು ಹಿರಿಯ ಪೊಲೀಸ್ ಅಧಿಕಾರಿಗಳ ಬೆಂಬಲ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಗೆ ಲಿಖಿತ ದೂರು ಸಲ್ಲಿಕೆಯಾಗಿದೆ. ಲಿಖಿತ ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ಮಾಡಿ ವರದಿ ನೀಡಲು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೂಚನೆ ನೀಡಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *