Breaking News

ರಾತ್ರಿ ವೇಳೆ ಮಹಿಳೆಯ ಮನೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್​​ ಮುಖಂಡ: ಹಿಗ್ಗಾಮುಗ್ಗಾ ಥಳಿಸಿದ ಯುವಕರು

ಚಿಕ್ಕಮಗಳೂರು: ವಿವಾಹಿತ ‌ಹಿಂದೂ ಮಹಿಳೆಯ ಜೊತೆ ಕಾಂಗ್ರೆಸ್ ಮುಖಂಡ ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ. ಹಿಂದೂ ಮಹಿಳೆಯ ಜೊತೆ ಕಾಂಗ್ರೆಸ್ ಮುಖಂಡ ಇರುವ ಫೋಟೋ ವೈರಲ್​ ವೈರಲ್​​ ಆಗಿದೆ. ಅಕ್ಕಪಕ್ಕದ ಮನೆಯ ಯುವಕರು ಮುಖಂಡನಿಗೆ ಥಳಿಸಿದ್ದಾರೆ. ಹಿಂದೂ ಮಹಿಳೆಯ ಮನೆಯಲ್ಲಿ ಇರುವಾಗಲೇ ಈ ಮುಖಂಡ ಸಿಕ್ಕಿಬಿದ್ದಿದ್ದಾನೆ. ಹಿಂದೂ ಮಹಿಳೆಯ ಮನೆಯಲ್ಲಿ ನಿನಗೇನು ಕೆಲಸ ಎಂದು ಥಳಿಸಿದ್ದಾರೆ. ಈ ಬಗ್ಗೆ ವಿಡಿಯೋ ಕೂಡ ವೈರಲ್​ ಆಗಿದೆ. ಚಿಕ್ಕಮಗಳೂರು ನಗರದ ಗಾಂಧಿನಗರದಲ್ಲಿ ಈ ಘಟನೆ ನಡೆದಿದೆ. ಇದೀಗ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ರಾತ್ರಿ ವೇಳೆ ಮಹಿಳೆಯಲ್ಲಿ ಕಾಂಗ್ರೆಸ್ ಮುಖಂಡ ರಾಹಿಲ್ ಶರೀಫ್ ಇರುವುದನ್ನು ಕಂಡು ಯುವಕರು ಕೋಪಗೊಂಡಿದ್ದಾರೆ. ಈ ಬಗ್ಗೆ ಮಹಿಳೆ ಕೂಡ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಾಹಿಲ್ ನನ್ನ ಸ್ನೇಹಿತ ,ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಔಷಧಿ ಕೊಡಲು ಮನೆಗೆ ಬಂದಿದ್ದರು, ಅ ಸಮಯದಲ್ಲಿ ಕೆಲವರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾಳೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *