ಕನಕಗಿರಿ: ತಾಲ್ಲೂಕಿನ ನವಲಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಪಾಯಿಯಾದ (ಸಹಾಯಕ ಹುದ್ದೆ) ಮೆಹಬೂಬಸಾಬ ಪಿಂಜಾರ ಅವರ ಮನೆಯಲ್ಲಿ ಮಂಗಳವಾರ ಕಳ್ಳತನವಾಗಿದೆ. ಗ್ರಾಮದ ವೀರಸಂಗಪ್ಪ ಪಟ್ಟಣಶೆಟ್ಟಿ ಅವರಿಗೆ ಸೇರಿದ ಮನೆಯಲ್ಲಿ ಕಳೆದ ಆರು ವರ್ಷಗಳಿಂದ ಬಾಡಿಗೆ ಇದ್ದು 15 ವರ್ಷದಿಂದ ಸಂಘದಲ್ಲಿ ಸಿಪಾಯಿ ಕೆಲಸ ಮಾಡುತ್ತಿರುವೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ₹ 1.50 ಲಕ್ಷ ನಗದು ಹಾಗೂ ₹ 7.50 ಲಕ್ಷ ಮೊತ್ತದ ಬಂಗಾರದ ಉಂಗುರ, ನೆಕ್ಲೆಸ್, ಮಂಗಳಸೂತ್ರ, ತಾಳಿ, ಕಿವಿಯೋಲೆಯನ್ನು ಕದ್ದುಕೊಂಡು ಹೋಗಿದ್ದಾರೆ’ ಎಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

