ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜು ಸಮೀಪದ ಕೀರ್ತಿನಗರ ಐದನೇ ಅಡ್ಡರಸ್ತೆ ವ್ಯಾಪ್ತಿಯಲ್ಲಿ ತೆಂಗಿನ ತೋಟಕ್ಕೆ ಗುರುವಾರ ಸಂಜೆ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆಅಗ್ನಿ ಶಾಮಕ ದಳದವರು ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಅನೇಕ ಮರಗಿಡಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಸಮೀಪದ ತೆಂಗಿನ ತೋಟಕ್ಕೂ ಬೆಂಕಿ ಆವರಿಸಿಕೊಂಡಿದೆ. ತೋಟದ ಬಹುಭಾಗಕ್ಕೆ ಹಾನಿಯಾಗಿದೆ. ರಾತ್ರಿಯ ವೇಳೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

