Breaking News

ಪೋಷಕರನ್ನು ಕಳೆದುಕೊಂಡ ಅಪ್ರಾಪ್ತೆಯರನ್ನು ಮಾರಾಟ ಮಾಡಿದ ಮಾವ – ಇಬ್ಬರು ಅರೆಸ್ಟ್!

ಬೆಂಗಳೂರಿನ ಕಗ್ಗಲೀಪುರದಲ್ಲಿ 11 ಮತ್ತು 12 ವರ್ಷದ ಇಬ್ಬರು ಅನಾಥ ಬಾಲಕಿಯರನ್ನು ಹಣಕ್ಕಾಗಿ ಕಾಮುಕರಿಗೆ ಒಪ್ಪಿಸಿ ಲೈಂಗಿಕ ದೌರ್ಜನ್ಯಕ್ಕೆ ಪ್ರೇರೇಪಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಕಿರಣ್ ಕುಮಾರ್ ನಾಯಕ್ (29) ಮತ್ತು ಆದಿತ್ಯ ಎಂ.ಕೆ. (20)ರನ್ನು ಸೈಬರ್ ಕಮಾಂಡ್ ಸೆಂಟರ್ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯರ ತಾಯಿ-ತಂದೆ ಮೃತಪಟ್ಟ ಬಳಿಕ ಅವರು ಮಾವನ ಆಶ್ರಯದಲ್ಲಿದ್ದರು. ಆದರೆ ಮಾವನೇ ಹಣದಾಸೆಗೆ ಆರೋಪಿಗಳಿಂದ ಹಣ ಪಡೆದು ಬಾಲಕಿಯರನ್ನು ಅವರ ವಶಕ್ಕೆ ನೀಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಒಂದು ವರ್ಷದಿಂದ ದೌರ್ಜನ್ಯ ನಡೆಯುತ್ತಿತ್ತು ಎನ್ನಲಾಗಿದೆ. ಆರೋಪಿಗಳು ಕೃತ್ಯದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲು ಯತ್ನಿಸಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ. NCRP ಅಲರ್ಟ್‌ನಿಂದ ಪ್ರಕರಣ ಬಹಿರಂಗವಾಗಿದೆ. ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಮಾವನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Share News

About BigTv News

Check Also

ಹೆಂಡತಿಯನ್ನೇ ಅಟ್ಟಾಡಿಸಿಕೊಂಡು ಆಸಿಡ್ ಎರಚಿ, ಮಚ್ಚಿನಿಂದ ಹಲ್ಲೆ ಮಾಡಿದ ಗಂಡ..!

ಬೆಂಗಳೂರು: ಜೆ.ಪಿ.ನಗರ 3ನೇ ಹಂತದ ನಾರಾಯಣ ಕ್ಲೀನಿಕ್ ಬಳಿ ಪತ್ನಿ ಮಧುಮಿತ ಮೇಲೆ ಪತಿ ವೆಂಕಟೇಶ್ ಆಸಿಡ್ ಎರಚಿ, ಮಚ್ಚಿನಿಂದ …

Leave a Reply

Your email address will not be published. Required fields are marked *