Breaking News

ಬಳ್ಳಾರಿ; ದೇವಸ್ಥಾನದಲ್ಲಿ ಮಾಂಸದ ಚೀಲ ಪತ್ತೆ: ಪೊಲೀಸರಿಂದ ತನಿಖೆ

ಬಳ್ಳಾರಿ: ಇಲ್ಲಿನ ನಾಗಲಕೆರೆ ಪ್ರದೇಶದಲ್ಲಿರುವ ದೇಗುಲದಲ್ಲಿ ಶುಕ್ರವಾರ(ಫೆ6)ಮಾಂಸದ ಚೀಲವೊಂದು ಪತ್ತೆಯಾಗಿದೆ. ಆಂಜನೇಯ ದೇವಸ್ಥಾನದ ಆವರಣದ ಹಿಂಭಾಗದಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಇದ್ದು.ವೆಂಕಟೇಶ್ವರ ದೇವಸ್ಥಾನದ ಮುಂದಿನ ಗರುಡ ಸ್ಥಂಬದ‌ ಮುಂದೆ ಪ್ಲಾಸ್ಟಿಕ್ ಕವರ್ ನಲ್ಲಿ ಮಾಂಸವಿರುವುದು ಕಂಡು ಬಂದಿದೆ. ಬೆಳಗ್ಗೆ ಅರ್ಚಕರು ಬಂದು ನೋಡಿದಾಗ ಕವರ್ ನೋಡಿ ಹೌಹಾರಿದ್ದಾರೆ. ತತ್ ಕ್ಷಣ ಸ್ಥಳೀಯರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಾಂಸದ ಚೀಲ ತೆರವು ಮಾಡಿ ತನಿಖೆ ನಡೆಸುತ್ತಿದ್ದಾರೆ.ಇದು ಕಿಡಿಗೇಡಿಗಳ ಕೃತ್ಯವೋ ಇಲ್ಲ ನಾಯಿಗಳು ತಂದು ಹಾಕಿರುವುದೋ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *