Breaking News

ಬೆಂಗಳೂರು : ಪ್ರಿಯಕರನ ಜೊತೆಗಿರಲು ಪತಿಯನ್ನೇ ಕೊಲೆಗಾರನನ್ನಾಗಿ, ಮಾಡಿ ಜೈಲಿಗೆ ಕಳುಹಿಸಿದ ಐನಾತಿ ಪತ್ನಿ!

ಆನೇಕಲ್ ನಲ್ಲಿ ಅಣ್ಣನ ಕೊಂದು ಆಂಥೋನಿ ಎಂಬಾತ ಜೈಲು ಪಾಲಾಗಿದ್ದಾನೆ. ಪ್ರಿಯಕರಣಿಗಾಗಿ ಗಂಡನನ್ನು ಪತ್ನಿ ಜೈಲಿಗೆ ಕಳುಹಿಸಿದ್ದಾಳ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಈ ಒಂದು ಘಟನೆ ನಡೆದಿದ್ದು, ಅಣ್ಣನನ್ನೇ ಕೊಂದು ತಮ್ಮ ಆಂಥೋನಿ ಜೈಲು ಸೇರಿದ್ದಾನೆ. ಆಂತೋನಿ ಪತ್ನಿ ರೋಜಿಗೆ ರಾಜೇಶ್ ಎಂಬಾತನ ಜೊತೆ ಲವ್ ಆಗಿದ್ದು ಪ್ರಿಯಕರನ ಜೊತೆಗೆ ಇರಲು ಗಂಡ ಆಂಥೋನಿ ಅಡ್ಡಿಯಾಗಿದ್ದ. ಕುಡಿತದ ನೆಪ ಒಡ್ಡಿ ಪತಿಯನ್ನು ರಿಹಾಬ್ ಸೆಂಟರ್ಗೆ ಪತ್ನಿ ದಾಖಲು ಮಾಡಿದ್ದಳು. 18 ತಿಂಗಳು ಬಳಿಕ ಪತಿ ಆಂಥೋನಿ ವಾಪಸ್ ಆಗಿದ್ದ. ಆತನ ಜೊತೆ ಜೀವನ ನಡೆಸಲು ಶರತ್ತು ಹಾಕಿದ್ದಳು. ತಾಯಿ ಅಣ್ಣ ತಮ್ಮ ಕೊಲ್ಲುವಂತೆ ಒತ್ತಡ ಹಾಕಿದ್ದಳು. ಹೀಗೆ ಅವರೆಲ್ಲರೂ ಕೊಂದು ಪತಿ ಜೈಲಿಗೆ ಹೋದ ಮೇಲೆ ಪ್ರಿಯಕರನ ಜೊತೆ ಇರಬೇಕೆಂದು ಪ್ಲಾನ್ ಹಾಕಿದ್ದಳು. ಪತ್ನಿಯ ಮಾತು ಕೇಳಿ ಆಂಥೋನಿ ಅಣ್ಣ ಬಾಲರಾಜನನ್ನು ಕೊಲೆ ಮಾಡಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಆಂಥೋನಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ಪತಿ ಜೈಲಿನಲ್ಲಿದ್ದಾನೆ. ಪ್ರಿಯಕರನ ಜೊತೆಗೆ ಇರಲು ಪತ್ನಿ ರೋಜಿ ಗಂಡನ ಕೈಯಲ್ಲೇ ಕೊಲೆ ಮಾಡಿಸಿ ಈ ಒಂದು ಕೃತ್ಯ ಎಸಗಿದ್ದಾಳೆ ಎನ್ನುವುದು ಬಯಲಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *