Breaking News

ಅಕ್ಟೋಬರ್‌ 1‌3 ರಿಂದ ಹುಬ್ಬಳ್ಳಿಯಲ್ಲಿ ಉದ್ಭವ್ ಇವೆಂಟ್ ಕಾರ್ಯಕ್ರಮ!

ಹುಬ್ಬಳ್ಳಿ: ಮೀಠಾ ಭಾರತ ವತಿಯಿಂದ ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಉದ್ಭವ್ -2023 ನ್ನು ಅಕ್ಟೋಬರ್ 13 ರಿಂದ ಮೂರು ದಿನಗಳವರೆಗೆ ಇಲ್ಲಿನ ಕೇಶ್ವಾಪುರದ ಶ್ರೀನಿವಾಸ್ ಗಾರ್ಡನ್’ನಲ್ಲಿ ಆಯೋಜಿಸಲಾಗಿದೆ ಎಂದು ಮೀಠಾ ಭಾರತ ಚೇರ್ಮನ್ ಪ್ರಕಾಶ ಕೋಠಾರಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಭವ -2023 ವಿಶಿಷ್ಠವಾದ ಕಾರ್ಯಕ್ರಮವಾಗಿದ್ದು, ಕಲಿಕೆ ಮತ್ತು ಗಳಿಸುವ ಸುವರ್ಣಕಾಶವನ್ನು ಯುವ ಉದ್ಯಮದಾರರಿಗೆ ನೀಡುತ್ತಿದೆ. ಜಿತೋ ಹುಬ್ಬಳ್ಳಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ವಿವಿಧ ವಲಯಗಳಲ್ಲಿ ವ್ಯಾಪಿಸಿರುವ ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ಪ್ರದರ್ಶಿಸುತ್ತದೆ. ಇದರ ಜೊತೆಗೆ ಲೈವ್ ಸೆಮಿನಾರ್’ಗಳನ್ನು ಒಳಗೊಂಡಿದೆ. ಕಲೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಇದಕ್ಕೆ ಪೂರಕವಾಗಿ ಆಕರ್ಷಣೆ ನೀಡಲಿವೆ ಎಂದರು.ಈ ಉದ್ಭವ ಮೆಗಾ ಇವೆಂಟ್’ನಲ್ಲಿ 140 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದಾರೆ. ಟ್ರೇಡ್ ಎಕ್ಸ್ಪೋ, ಮಹಿಳಾ ಸಮಾವೇಶ, ಯುವ ಸಮಾವೇಶ, ಪವರ್ ಪ್ಯಾಕ್ ಸೆಷನ್ಸ್, ಮುಖ್ಯ ಭಾಷಣಕಾರರು, ಅಧಿವೇಶನ, ಮನರಂಜನೆ, ಫುಡ್ ಕಾರ್ನಿಯಲ್, ಜೈನ್ ಪೆವಿಲಿಯನ್ ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳು ನಡೆಯಲಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಚಿಪ್ ಸೆಕ್ರೆಟರಿ ಭರತ್ ಪಟ್ವಾರಿ, ಪ್ರವೀಣ ಚೌದರಿ, ಅಂಕಿತ, ಸಂಗೀತಾ ಸಂದವಿ,‌ ಲಲಿತಾ ಸುರಾಣ, ವನಿತಾ ,ಧರ್ಮೆಂದ್ರ ಜೈನ್. ಸೇರಿದಂತೆ ಇತರರು ಉಪಸ್ಥಿತರಿದ್ದರು.

Share News

About BigTv News

Check Also

ಹುಬ್ಬಳ್ಳಿಯ ಸ್ಪಾಗಳ ಕರಾಳ ಮುಖ..! ಮಸಾಜ್ ಹೆಸರಿನಲ್ಲಿ ಅಕ್ರಮ ದಂಧೆಯ ಶಂಕೆ — ಕಮಿಷನರ್ ಸಾಹೇಬರೇ, ಇತ್ತ ಗಮನ ಹರಿಸಿ!

ಸ್ಪಾಗಳ ಒಳಗೆ ನಡೆಯುತ್ತಿದೆಯಾ ಅಕ್ರಮದ ಆಟ..? ದಂಧೆ ಸಾಬೀತಾದರೆ ಬುಲ್ಡೋಜರ್ ಕ್ರಮ ಬೇಡ, ಕಾನೂನಿನ ಕಠಿಣ ಕ್ರಮವಾಗಲಿ! ಮಸಾಜ್ ಹೆಸರಿನಲ್ಲಿ …

Leave a Reply

Your email address will not be published. Required fields are marked *