ಕಾರ್ಕಳ: ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್ಬೆಟ್ಟು ಎಂಬಲ್ಲಿ ಮನೆಯಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ 11 ಮಂದಿಯನ್ನು ಕಾರ್ಕಳ ಪೊಲೀಸರು ಫೆ.7ರಂದು ರಾತ್ರಿ ವೇಳೆ ಬಂಧಿಸಿದ್ದಾರೆ. ಬೆಳ್ತಂಗಡಿ ಗುರುವಾಯನಕೆರೆಯ ಉಮ್ಮರ ಫಾರೂಕ್(62), ಬಂಟ್ವಾಳ ತಾಲೂಕಿನ ಸಜಿಪಪಡುವಿನ ಅಬ್ದುಲ್ ಅಝೀಝ್ (40), ಕಾರ್ಕಳ ಗುಡ್ಡೆಯಂಗಡಿಯ ಸತೀಶ ಎಸ್.ಪ್ರಭು(49), ಮಂಗಳೂರು ಬೊಳಿಯಾರಿನ ಅಬ್ದುಲ್ ರಹಿಮಾನ್ (49), ಬಂಟ್ವಾಳ ತಾಲೂಕಿನ ಮೂಡಾದ ಸಮೀರ್ (46), ಮಂಗಳೂರು ಬೇಂಗ್ರೆಯ ಸುಲೈಮಾನ್ (45), ಬಂಟ್ವಾಳ ಸಜಿಪ ನಡುವಿನ ಇರ್ಫಾನ್(26), ಸಜಿಪ ಮೂನ್ನೂರಿನ ಚೇತಕ್(38) ಬಂಧಿತ ಆರೋಪಿಗಳು. ಇವರಿಂದ ಜುಗಾರಿ ಆಟಕ್ಕೆ ಬಳಸಿದ ನಗದು 22690ರೂ. ಹಾಗೂ 9 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳೂರಿನ ಅಪ್ರಿತ್ ಹಾಗೂ ನಿಶಾಂತ ಎಂಬವರು ಅಕ್ರಮವಾಗಿ ಹಣವನ್ನು ಪಣವಾಗಿರಿಸಿ ಜುಗಾರಿ ಆಟ ನಡೆಸುತ್ತಿದ್ದು, ಈ ಬಗ್ಗೆ ದೊರೆತ ಮಾಹಿತಿಯಂತೆ ದಾಳಿ ನಡೆಸಿದ ಕಾರ್ಕಳ ನಗರ ಪೊಲೀಸ್ ಠಾಣಾ ಎಸ್ಸೈ ಮುರುಳೀಧರ ನಾಯ್ಕ ಹಾಗೂ ಸಿಬ್ಬಂದಿ, ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಉಳಿದ ಮೂರು ಆರೋಪಿಗಳು ಓಡಿ ಹೋಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

