Breaking News

ಒಣಗಿಸಲು ಹಾಕಿದ್ದ ಕೊಬ್ಬರಿ ಕಳ್ಳತನ

ಸುಳ್ಯ: ಗೋಡೌನ್ ಎದುರು ಒಣಗಿಸಲು ಹಾಕಿದ್ದ ಹಸಿ ಮತ್ತು ಒಣ ಕೊಬ್ಬರಿಯನ್ನು ಕಳವುಗೈದ ಘಟನೆ ಜಾಲ್ಸೂರು ಗ್ರಾಮದ ಬೊಳುಬೈಲಿನಲ್ಲಿ ರವಿವಾರ ರಾತ್ರಿ ನಡೆದಿದೆಬೊಳುಬೈಲಿನ ಅಬೂಬಕ್ಕರ್ ಅವರು ಒಣ ತೆಂಗಿನ ಕಾಯಿ ವ್ಯಾಪಾರ ನಡೆಸುತ್ತಿದ್ದು ಇದನ್ನು ಜಾಲ್ಸೂರು ಗ್ರಾಮದ ಬೊಳುಬೈಲು ಎಂಬಲ್ಲಿಗೋಡೌನ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಹಸಿ ಕೊಬ್ಬರಿಯನ್ನು ಗೋಡೌನ್‌ನ ಎದುರಿನ ಜಾಗದಲ್ಲಿಒಣಗಲು ಹಾಕಿದ್ದರು. ರವಿವಾರ ಮಧ್ಯರಾತ್ರಿ ಶಬ್ದ ಕೇಳಿದ ಬಳಿಕ ಬಂದು ನೋಡಿದಾಗ ಅಪರಿಚಿತ ವ್ಯಕ್ತಿ ಚೀಲದಲ್ಲಿಒಣ ತೆಂಗಿನ ಕಾಯಿಯನ್ನುತುಂಬಿಸಿ ಇಟ್ಟಿದ್ದ. ಮನೆಯವರನ್ನು ನೋಡಿದಾಗ ಆತ ಪರಾರಿಯಾಗಲು ಯತ್ನಿಸಿದ್ದ. ಆತನನ್ನು ಹಿಡಿದು ವಿಚಾರಿಸಿದಾಗ ಬೆಟ್ಟಂಪಾಡಿಯ ಎಸ್.ಎ. ಶರೀಪ್(35), ಎಂದು ತಿಳಿಸಿದ್ದಾನೆ. ಈ ವೇಳೆ ಕೊಬ್ಬರಿಯನ್ನು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಸುಮಾರು 30 ಸಾವಿರ ರೂ. ಮೌಲ್ಯದ 50 ಕೆ.ಜಿ. ಕೊಬ್ಬರಿ ಕಳ್ಳತನ ಮಾಡಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *