Breaking News

₹16 ಕೋಟಿ ಗಾಂಜಾ ವಶ, ಮೂವರ ಬಂಧನ

ದೇವನಹಳ್ಳಿ: ಬ್ಯಾಂಕಾಕ್‌ ಮತ್ತು ಥಾಯ್ಲೆಂಡ್‌ನಿಂದ ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹16.21 ಕೋಟಿ ಮೌಲ್ಯದ ಹೈಡ್ರೊಫೋನಿಕ್‌ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ. ಕಳ್ಳಸಾಗಣೆ ಮಾಡುತ್ತಿದ್ದ ಮೂವರು ಪ್ರಯಾಣಿಕರನ್ನು ವಶಕ್ಕೆ ಪಡೆಯಲಾಗಿದೆ.ಬ್ಯಾಂಕಾಕ್‌ನಿಂದ ಬಂದಿಳಿದ ಇಬ್ಬರು ಪ್ರಯಾಣಿಕರ ಲಗೇಜ್ ಬ್ಯಾಗ್‌ಗಳಲ್ಲಿ ಸಾಗಿಸುತ್ತಿದ್ದ ₹8.31 ಕೋಟಿ ಮೌಲ್ಯದ 23.76 ಕೆ.ಜಿ ಹೈಡ್ರೊಫೋನಿಕ್‌ ಗಾಂಜಾ ಪತ್ತೆಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಥಾಯ್ಲೆಂಡ್‌ನಿಂದ ಬಂದಿಳಿದ ಮತ್ತೊಬ್ಬ ಪ್ರಯಾಣಿಕ ಆಹಾರ ಪದಾರ್ಥಗಳ ಪ್ಯಾಕೆಟ್‌ಗಳಲ್ಲಿ ₹3.70 ಕೋಟಿ ಮೌಲ್ಯದ 10.58 ಕೆ.ಜಿ ಗಾಂಜಾ ಮರೆಮಾಚಿ ಕಳ್ಳಸಾಗಣೆ ಮಾಡುತ್ತಿದ್ದಾಗ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾನೆ. ಬ್ಯಾಂಕಾಕ್‌ನಿಂದ ಮಂಗಳವಾರ ಬಂದ ಮತ್ತೊಬ್ಬ ಪ್ರಯಾಣಿಕನಿಂದ ₹4.20 ಕೋಟಿ ಮೌಲ್ಯದ 12 ಕೆ.ಜಿ ಹೈಡ್ರೊಫೋನಿಕ್‌ ಗಾಂಜಾ ವಶಪಡಿಸಿಕೊಂಡು, ಪ್ರಯಾಣಿಕನನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ಮಾದಕ ವಸ್ತುಗಳ ನಿಷೇಧ ಕಾಯ್ದೆ (ಎನ್‌ಡಿಪಿಎಸ್) ಅಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *