Breaking News

ಕರ್ನಾಟಕ-ಗೋವಾ ಗಡಿಯಲ್ಲಿ 400 ಕೋಟಿ ರೂ. ದರೋಡೆ ಕಟ್ಟು ಕಥೆ : SIT ತನಿಖೆಯಲ್ಲಿ ಧೃಡ.!

ಬೆಳಗಾವಿ: ಕರ್ನಾಟಕ–ಗೋವಾ ಗಡಿಯ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ ದೇಶದ ಅತಿದೊಡ್ಡ 400 ಕೋಟಿ ರೂಪಾಯಿ ದರೋಡೆ ಪ್ರಕರಣಕ್ಕೆ ಇದೀಗ ದೊಡ್ಡ ತಿರುವು ಸಿಕ್ಕಿದೆ. ಈ ದರೋಡೆ ಪ್ರಕರಣವೇ ನಕಲಿ ಎನ್ನುವ ಸತ್ಯ, ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ – ಎಸ್‌ಐಟಿ ತನಿಖೆಯಲ್ಲಿ ಬಯಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ನಾಸಿಕ್ ಮೂಲದ ಉದ್ಯಮಿ ಸಂದೀಪ್ ಪಾಟೀಲ್ ಎಂಬುವವರು, ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳಲ್ಲಿ 400 ಕೋಟಿ ರೂಪಾಯಿ ಹಣವನ್ನು ಚೋರ್ಲಾ ಘಾಟ್ ಬಳಿ ದರೋಡೆ ಮಾಡಲಾಗಿದೆ ಎಂದು ದೂರು ನೀಡಿದ್ದರು. ಆದರೆ ಇದೀಗ ಮಹಾರಾಷ್ಟ್ರ ಎಸ್‌ಐಟಿ ನಡೆಸಿದ ತನಿಖೆಯಲ್ಲಿ, ಕರ್ನಾಟಕ ಅಥವಾ ಗೋವಾ ಗಡಿಯಲ್ಲಿ ಯಾವುದೇ ದರೋಡೆ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ದೂರುದಾರ ನೀಡಿದ ಸ್ಥಳ, ಸಮಯ ಮತ್ತು ಮಾಹಿತಿ – ವಾಸ್ತವ ಪರಿಸ್ಥಿತಿಗೆ ಯಾವುದೇ ರೀತಿಯಲ್ಲೂ ಹೊಂದಿಕೆಯಾಗುತ್ತಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದೂರು ನೀಡಲಾದ ಸಮಯದಲ್ಲಿ ಚೋರ್ಲಾ ಘಾಟ್ ಮಾರ್ಗದಲ್ಲಿ ಅಂತಹ ಯಾವುದೇ ಕಂಟೇನರ್ ಸಂಚರಿಸಿಲ್ಲ ಎಂಬುದೂ ದೃಢಪಟ್ಟಿದೆ. ದರೋಡೆಗೊಂಡಿದೆ ಎಂದು ಹೇಳಲಾಗಿದ್ದ ಹಣ ರದ್ದಾದ 2000 ರೂಪಾಯಿ ಮುಖಬೆಲೆಯ ನೋಟುಗಳು ಎನ್ನಲಾಗಿದೆ. ಈ ಹಣ ಮುಂಬೈನ ಒಬ್ಬ ಪ್ರಭಾವಿ ಬಿಲ್ಡರ್‌ಗೆ ಸೇರಿದ್ದೇ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು. ಆದರೆ ದೂರುದಾರನ ಹೇಳಿಕೆಗಳು ಹಾಗೂ ಸ್ಥಳೀಯ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸಿಕ್ಕ ಮಾಹಿತಿಗಳ ನಡುವೆ ಹೊಂದಾಣಿಕೆ ಇಲ್ಲದಿರುವುದು ಮೊದಲಿನಿಂದಲೂ ಅನುಮಾನಕ್ಕೆ ಕಾರಣವಾಗಿತ್ತು. ಈಗ ಎಸ್‌ಐಟಿ ತನಿಖೆಯಲ್ಲಿ, ಈ ಸಂಪೂರ್ಣ ಪ್ರಕರಣವೇ ಯೋಜಿತ ಪಿತೂರಿ ಮತ್ತು ಕಟ್ಟುಕಥೆ ಎಂಬುದು ಬಹಿರಂಗವಾಗಿದ್ದು, ಈ ವರದಿಯನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಎಸ್‌ಐಟಿ ಸಲ್ಲಿಸಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *