ಧಾರವಾಡ: ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಇಂದು ಬಕ್ರೀದ್ ಹಬ್ಬದ ಸಂಭ್ರಮ ಜೋರಾಗಿದೆ. ಧಾರವಾಡದ ಮೆಹಬೂಬ್ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದು, ಮುಸ್ಲಿಂ ಧರ್ಮ ಗುರುಗಳಿಂದ ಬಕ್ರೀದ್ ಪ್ರಾರ್ಥನೆ ಬೋಧನೆ ಮಾಡಲಾಯಿತು. ಬಕ್ರೀದ್ ಹಬ್ಬದ ಪ್ರಾರ್ಥನೆಯೊಂದಿಗೆ ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಿದರು.
ಪುರುಷರು ಮಕ್ಕಳು ಸೇರಿ ಮುಸ್ಲಿಂ ಸಮುದಾಯದ ಹಿರಿಯರು ಪ್ರಾರ್ಥನೆಯಲ್ಲಿ ಭಾಗಿಯಾಗಿ ಸಾಮೂಹಿಕ ಪ್ರಾರ್ಥನೆ ಬಳಿಕ ಒಬ್ಬರಿಗೊಬ್ಬರು ಹಬ್ಬದ ಶುಭಾಶಯಗಳ ವಿನಿಮಯ ಮಾಡಿಕೊಂಡರು. ಹೊಸ ಬಟ್ಟೆ ಧರಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಮಕ್ಕಳು ಗಮನ ಸೆಳೆದಿದ್ದು, ಪ್ರಾರ್ಥನೆಯಲ್ಲಿ ಕಾಂಗ್ರೆಸ್ ಮುಖಂಡ ದೀಪಕ ಚಿಂಚೊರೆ, ಇಸ್ಮಾಯಿಲ್ ತಮಾಟಗಾರ ಹಲವರು ಭಾಗಿಯಾಗಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news





