ನಗರದಲ್ಲಿ ಮಾದಕ ವಸ್ತು ಮಾರಾಟ ಮತ್ತು ಸಾಗಾಟದ ಮೇಲೆ ಪೊಲೀಸರು ಕಾರ್ಯಾಚರಣೆ ಮುಂದು ವರಿಸಿದ್ದು, ಬೆಂಗಳೂರು ಮೂಲದ ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಿರುವ ನಗರ ಸಿಸಿಬಿ ಪೊಲೀಸರು 5.10 ಲಕ್ಷ ರೂ.ಮೌಲ್ಯದ ಮಾದಕವಸ್ತು ವಶಪಡೆಸಿಕೊಂಡಿದ್ದಾರೆ. ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿಗಳಾದ ಆರ್.ಪ್ರಮೋದ್ (27) ಹಾಗೂ ಎಂ.ವಿಕಾಸ್ (23) ಬಂಧಿತರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಎಂಡಿಎಂಎ ಹಾಗೂ ಗಾಂಜಾವನ್ನು ಬೆಂಗಳೂರು ಕಡೆಯಿಂದ ಮೈಸೂರು ನಗರಕ್ಕೆ ಪೂರೈಕೆ ಮಾಡುತ್ತಿದ್ದ ಜಾಲದ ಮೇಲೆ ಮಂಗಳ ವಾರ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 51 ಗ್ರಾಂ ಎಂಡಿಎಂಎ ಮತ್ತು 2.2 ಕೆಜಿ ಗಾಂಜಾ, 1 ಕಾರನ್ನು ವಶಪಡೆಸಿಕೊಂಡಿದ್ದಾರೆ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

