Breaking News

ಆಸ್ತಿ ವಿಚಾರವಾಗಿ ಸಾರಿಗೆ ಇಲಾಖೆ ನೌಕರರನ್ನು ಬರ್ಬರವಾಗಿ ಹತ್ಯೆ ಪ್ರಕರಣ: 10 ಮಂದಿ ವಿರುದ್ಧ FIR ದಾಖಲು

ಹಾಸನ: ಜಿಲ್ಲೆಯಲ್ಲಿ ಆಸ್ತಿ ವಿಚಾರವಾಗಿ ಸಾರಿಗೆ ಇಲಾಖೆಯ ನೌಕರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ 10 ಮಂದಿ ಆರೋಪಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹಾಸನದ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರಿಗೆ ಇಲಾಖೆಯ ನೌಕರ ವೀರಪ್ಪ ಎಂಬುವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅವರ ಪುತ್ರ ವಿವೇಕ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಸಾರಿಗೆ ಇಲಾಖೆ ನೌಕರ ವೀರಪ್ಪ ಹತ್ಯೆ ಪ್ರಕರಣದಲ್ಲಿ ಮಲ್ಲಮ್ಮ, ಹರೀಶ, ಮಹದೇವಮ್ಮ, ಬಾಗಲಯ್ಯ, ಲೋಕೇಶ, ಸತೀಶ, ಧರ್ಮ, ಜಯರಾಮ, ಸ್ವಾಮಿ ಎಂಬುವರು ಸೇರಿದಂತೆ 10 ಮಂದಿ ವಿರುದ್ಧ ಆಲೂರು ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *