Breaking News

ಅಂತಾರಾಜ್ಯ ಮೊಬೈಲ್ ಕಳ್ಳರ ಬಂಧನ

ಕೊರಟಗೆರೆ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜನರನ್ನು ಯಾಮಾರಿಸಿ ಮೊಬೈಲ್ ಕದಿಯುತ್ತಿದ್ದ ಅಂತಾರಾಜ್ಯ ಖದೀಮರನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವೈ.ಎಸ್.ನಗರದ ಶಿವಶಂಕರ(19), ತಿರುಪತಿ ಜಿಲ್ಲೆ ಗುಂಡಕಲ್ಲು ಪಟ್ಟಣದ ಪರಶುರಾಮ(22), ಮದನಪಲ್ಲಿ ತಾಲೂಕು ರಾಮರಾವ್ ಕಾಲನಿಯ ರಾಮ(19) ಹಾಗೂ ಗೋಕಾಕ್ ತಾಲೂಕು ಘಟಪ್ರಭ ಗ್ರಾಮದ ಪವನ್(20) ಬಂಧಿತರು 6ರಂದು ಕೊರಟಗೆರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಅಶೋಕ್ ಎಂಬುವವರ ಜೇಬಿನಿಂದ 25 ಸಾವಿರ ರೂ.ಬೆಲೆಬಾಳುವ ಮೊಬೈಲ್ ಕಳ್ಳತನದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಕೊರಟಗೆರೆ ಪೊಲೀಸರಿಗೆ ಮೊಬೈಲ್ ಕಳ್ಳರ ಜಾಲ ಸಿಕ್ಕಿಬಿದ್ದಿದೆ. ಬಂಧಿತ ಆರೋಪಿಗಳಿಂದ ವಿವಿಧ ಕಂಪನಿಗಳ 35 ಲಕ್ಷ ರೂ. ಬೆಲೆಬಾಳುವ ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಳ್ಳಲಾಗಿದೆ.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *