Breaking News

ಭಾರತದ ಜೊತೆ ಹೊಂದಾಣಿಕೆ ಭಾವನೆಗೆ ಮುಂದಾದ ಬಾಂಗ್ಲಾದೇಶ

ನವದೆಹಲಿ: ಭಾರತದ ಜೊತೆಯಲ್ಲಿ ಕಿರಿಕ್ ಮಾಡಿಕೊಳ್ಳಲು ಸಜ್ಜಾದಂತೆ ಕಾಣುತ್ತಿದ್ದ ಬಾಂಗ್ಲಾದೇಶ ಈಗ ಮಂಡಿ ಊರುವ ಪರಿಸ್ಥಿತಿ ಬಂದಿದೆ. ಆಂತರಿಕ ಹಿಂಸಾಚಾರದಲ್ಲಿ ನಲುಗಿ ಹೋದ, ಭಾರತದ ನೆರೆಯ ದೇಶ ಬಾಂಗ್ಲಾ ಇದೀಗ ಭಾರತದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು, ಜೀವನ ನಡೆಸಲು ಸಿದ್ಧವಾಗಿರುವ ಸೂಚನೆ ನೀಡಿದೆ.
ಬಾಂಗ್ಲಾದೇಶ ಹಿಂಸಾಚಾರದ ಬೆಂಕಿಯಲ್ಲಿ ನರಳಿದ ನಂತರ ಕೈಯಲ್ಲಿ ಕಾಸು ಇಲ್ಲದೆ ತೀವ್ರ ಪರದಾಟ ಪಡುತ್ತಿದೆ. ಅದರಲ್ಲೂ ಬಾಂಗ್ಲಾದೇಶ ಜನರು ಇಷ್ಟೆಲ್ಲಾ ಹಿಂಸಾಚಾರ ನಡೆಸಿದ್ದ ಕಾರಣಕ್ಕೆ, ಅಲ್ಲಿದ್ದ ಫ್ಯಾಕ್ಟರಿ & ಕಂಪನಿಗಳಿಗೆ ಭಾರಿ ನಷ್ಟ ಆಗಿದೆ. ಅದರಲ್ಲೂ ಬಾಂಗ್ಲಾದ ಬಹುತೇಕ ಪ್ರದೇಶದಲ್ಲಿ ಇದ್ದ ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಬಾಗಿಲು ಹಾಕಿಕೊಂಡು ಭಾರತಕ್ಕೆ ಓಡಿ ಬಂದಿವೆ. ಪರಿಸ್ಥಿತಿ ಹೀಗಿದ್ದಾಗ ಭಾರತದ ಜೊತೆಗೆ ಸಂಬಂಧ ಸುಧಾರಣೆಗಾಗಿ ಬಾಂಗ್ಲಾ ರಾಜಕೀಯ ನಾಯಕರು ಮನಸ್ಸು ಮಾಡಿದ್ದು, ಭಾರತದ ಬಳಿ ಮಂಡಿಯೂರುವ ಪರಿಸ್ಥಿತಿ ಬಂದಂತಾಗಿದೆ. ಸುಮಾರು ವರ್ಷಗಳಿಂದ ಕಿರಿಕ್ ನಡೆಯುತ್ತಿರುವ ನದಿ ನೀರಿನ ಹಂಚಿಕೆಯ ವಿಚಾರವಾಗಿ ಮಾತುಕತೆಗೆ ಸಿದ್ಧ ಎಂಬ ಸಂದೇಶವನ್ನು ಬಾಂಗ್ಲಾದೇಶದ ನಾಯಕರು ನೀಡಿದ್ದಾರೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *