ಬೆಂಗಳೂರು:- ಮನೆ ಬಳಿ ಬಂದ ಕೆನರಾ ಬ್ಯಾಂಕ್ ಮತ್ತು ಹತ್ತಿರದ HDFC ಎಟಿಎಂ ಕಳ್ಳತನ ಯತ್ನದಲ್ಲಿ ಹಸನ್ ಎಂಬ ವ್ಯಕ್ತಿ ಬಂಧನಕ್ಕೆ ಒಳಪಟ್ಟಿದ್ದಾರೆ.ಹಸನ್, 12 ಲಕ್ಷ ರೂ. ಸಾಲ ತೀರಿಸಲು ಮತ್ತು ಮನೆ ಕಟ್ಟಲು ಸಾಲ ಪಡೆದಿದ್ದ, ಆದರೆ ಹಣವನ್ನು ಪೂರೈಸಲು ಸಾಧ್ಯವಾಗದೆ ಕಳ್ಳತನಕ್ಕೆ ಮುಂದಾದನು. ಶನಿವಾರ ಮಧ್ಯರಾತ್ರಿ ಮೊದಲ ಯತ್ನದಲ್ಲಿ ಸೈರನ್ ಸೌಂಡ್ ಮತ್ತು ಸಿಸಿಟಿವಿ ದೃಶ್ಯಗಳಿಂದ ವಿಫಲನಾದ ಹಸನ್, ಭಾನುವಾರ ಮತ್ತೆ ಬ್ಯಾಂಕ್ ಕಿಟಕಿ ಗ್ರಿಲ್ ಕಟ್ ಮಾಡಿ ಒಳಗೆ ಪ್ರವೇಶಿಸಲು ಯತ್ನಿಸಿದನು. ಆದರೆ ಎಸ್ಕೇಪ್ ಆದ ಹಸನ್, ನಂತರ HDFC ಎಟಿಎಂಗೂ ಭೇಟಿ ನೀಡಿದರೂ ಹಣ ತೆಗೆಯಲಿಲ್ಲ. ಶೇಷಾದ್ರಿಪುರಂ ಪೊಲೀಸ್‌ರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ, ಮಾಸ್ಕ್ ಹಾಕಿದ್ದರೂ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

