ಯಾದಗಿರಿ: ಜಿಲ್ಲೆಯಲ್ಲಿ ಲೀಥಿಯಮ್ ಸಿಗುತ್ತೆ ಅಂತ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರೆ ಸ್ಪಷ್ಟ ಪಡಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ವಸ್ತುಗಳನ್ನ ತಯಾರಿಕೆಯಲ್ಲಿ ಬಹುಮುಖ್ಯ ಪಾತ್ರವಾಗುವ ಲೀಥಿಯಮ್ ಅಂಶ ಯಾದಗಿರಿ ಜಿಲ್ಲೆಯಲ್ಲೂ ಸಿಗ್ತಾಯಿರೋದು ವಿಶೇಷವಾಗಿದೆ. ಆ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಲೀಥಿಯಮ್ ಗಣಿಗಾರಿಕೆ ಆರಂಭಿಸಲು ಕೇಂದ್ರ ಮುಂದಾಗಿದೆ.
ಇದೆ ಮೊದಲ ಬಾರಿಗೆ ದೇಶದಲ್ಲಿ ಲೀಥಿಯಮ್ ಗಣಿಗಾರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ, ಚಿನ್ನದಂತೆ ವಿರಳವಾಗಿ ಸಿಗುವ ಬಿಳಿ ಬಂಗಾರ ಅಂತ ಕರೆಸಿಕೊಳ್ಳುವ ಲೀಥಿಯಮ್ ಗಣಿಗಾರಿಕೆ ಮಾಡಲು ಮುಂದಾಗಿದೆ. ಇದೆ ಕಾರಣಕ್ಕೆ ದೇಶದಲ್ಲಿ ಲೀಥಿಯಮ್ ಸಿಗುವ ಸ್ಥಳಗಳನ್ನ ಗುರುತಿಸುವ ಕೆಲಸ ಮಾಡ್ತಾಯಿದೆ. ಇದೆ ಲೀಥಿಯಮ್ ಅಂಶ ರಾಜ್ಯದ ಆ ಎರಡು ಜಿಲ್ಲೆಗಳಲ್ಲಿ ಸಿಗುವ ಬಗ್ಗೆ ಖುದ್ದು ಕೇಂದ್ರ ಸರ್ಕಾರವೇ ಮಾಹಿತಿ ಬಹಿರಂಗ ಪಡೆಸಿದೆ.
ರಾಜ್ಯದ ಮಂಡ್ಯ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಲೀಥಿಯಮ್ ಸಿಗುತ್ತೆ ಅಂತ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರೆ ಸ್ಪಷ್ಟ ಪಡಿಸಿದ್ದಾರೆ. ಅದರಲ್ಲೂ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಂಗಳೂರು ಗ್ರಾಮದ ಹೊರ ಭಾಗದಲ್ಲಿ ಸಿಗುತ್ತೆ ಅಂತ ಹೇಳಲಾಗಿದ್ದು ಗ್ರಾಮದ ಹೊರ ಭಾಗದಲ್ಲಿರುವ ಬೆಟ್ಟದಲ್ಲಿ ಲೀಥಿಯಮ್ ನಿಕ್ಷೇಪ ಪತ್ತೆಯಾಗಿದೆ. ಕಳೆದ ಆರು ತಿಂಗಳ ಹಿಂದೆ ನಿರಂತರವಾಗಿ ಎರಡು ವರ್ಷಗಳ ಕಾಲ ಲೀಥಿಯಮ್ ನಿಕ್ಷೇಪಕ್ಕಾಗಿ ಸಂಶೋಧನೆಯನ್ನ ನಡೆಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

