Breaking News

ಹುಬ್ಬಳ್ಳಿ: ರೆಕ್ಸಿನ್ ಮತ್ತು ಫೋಮ್ ಗೋಡೌನ್‌ಗೆ ಭೀಕರ ಬೆಂಕಿ…

ಹುಬ್ಬಳ್ಳಿ ನಗರದಲ್ಲಿ ಕುಶನ್ ತಯಾರಿಕೆಗೆ ಬಳಸುವ ರೆಕ್ಸಿನ್ ಹಾಗೂ ಫೋಮ್ ಮಾರಾಟ ಮಳಿಗೆ ಮತ್ತು ಗೋಡೌನ್‌ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಘಟನೆ ಹುಬ್ಬಳ್ಳಿ. ನೆಹರೂ ಮೈದಾನದ ಸಮೀಪದಲ್ಲಿರುವ Vishal Enterprises ಮಳಿಗೆ ಮತ್ತು ಗೋಡೌನ್‌ನಲ್ಲಿ ನಡೆದಿದೆ. ಗೋಡೌನ್‌ನಲ್ಲಿ ಕೆಲಸ ನಡೆಯುತ್ತಿದ್ದ ವೇಳೆ ಬೆಂಕಿ.. ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಫೋಮ್ ಹಾಗೂ ರೆಕ್ಸಿನ್ ವಸ್ತುಗಳಿಗೆ ವ್ಯಾಪಿಸಿದೆ.
ಗೋಡೌನ್‌ನಲ್ಲಿ ಶೇಖರಿಸಿಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಫೋಮ್ ಮತ್ತು ಇತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಈ ಗೋಡೌನ್ ಚೆನ್ನವೀರೇಶ ಎಂಬುವವರಿಗೆ ಸೇರಿದದ್ದಾಗಿದೆ ಎನ್ನಲಾಗಿದೆ.
ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಸ್ಥಳೀಯ ಶಹರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ಮುಂದುವರಿದಿದೆ.

Share News

About Shaikh BigTv

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *