Breaking News

ಮಂಗಳೂರು ವಿಮಾನ ನಿಲ್ದಾಣ: 80 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶ

ಸುಮಾರು 80 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗುತ್ತಿದ್ದ ವೇಳೆ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕೇರಳ ಮೂಲದ ಓರ್ವ ಪುರುಷ ಮತ್ತು ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ರೆವೆನ್ಯೂ ಇಂಟಲಿಜೆನ್ಸ್ ನಿರ್ದೇಶನಾಲಯ (ಡಿಆರ್ ಐ) ಮಂಗಳೂರು ಘಟಕ ತಿಳಿಸಿದೆ. ಫೆ.27ರಂದು ವಿಮಾನ ನಿಲ್ದಾಣದ ನಿರ್ಗಮನ ಹಾಲ್‌ನಲ್ಲಿ ಒಬ್ಬ ಪುರುಷ ಮತ್ತು ಇಬ್ಬರು ಮಹಿಳಾ ಪ್ರಯಾಣಿಕರು ಅಬುಧಾಬಿಗೆ ಪ್ರಯಾಣಿಸಲು ಆಗಮಿಸಿದ್ದರು. ಖಚಿತ ಗುಪ್ತಚರ ಮಾಹಿತಿ ಆಧಾರದಲ್ಲಿ ಡಿಆರ್ ಐ ಮಂಗಳೂರು ಪ್ರಾದೇಶಿಕ ಘಟಕದ ಅಧಿಕಾರಿಗಳು ಅವರನ್ನು ತಡೆದು ತಪಾಸಣೆಗೆ ಒಳಪಡಿಸಿದರು. ಆರೋಪಿಗಳು ವಿದೇಶಿ ಕರೆನ್ಸಿಗಳನ್ನು ಅವರ ಕೈಚೀಲ ಮತ್ತು ಚೆಕ್ ಇನ್ ಬ್ಯಾಗ್ ಗಳಲ್ಲಿಅತ್ಯಂತ ಚಾಣಾಕ್ಷತನದಿಂದ ಅಡಗಿಸಿ ಇಟ್ಟಿರುವುದು ಪತ್ತೆಯಾಗಿದೆ. ವಶಪಡಿಸಿಕೊಳ್ಳಲಾದ ಕರೆನ್ಸಿಯಲ್ಲಿ ಅಮೆರಿಕನ್ ಡಾಲರ್‌ಗಳು, ಸ್ವಲ್ಪ ಪ್ರಮಾಣದ ಪೌಂಡ್ ಸ್ಟರ್ಲಿಂಗ್, ಸೌದಿ ರಿಯಾಲ್ ಮತ್ತು ಯುಎಇ ದಿರ್ ಹಾಮ್ ಸೇರಿವೆ. ಕೇರಳ ಮೂಲದ ಈ ಮೂವರನ್ನು ಕಸ್ಟಮ್ಸ್ ಕಾಯ್ದೆ, 1962ರಡಿ ಬಂಧಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಜಾಲದ ಇತರ ಸದಸ್ಯರು ಹಾಗೂ ಪ್ರಕರಣದ ಹೂಡಿಕೆದಾರರನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಡಿಆರ್ ಐ ಅಧಿಕಾರಿಗಳು ತಿಳಿಸಿದ್ದಾರೆ.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *