ಉಡುಪಿ ಜಿಲ್ಲೆಯ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‌ನಿಂದ ಪಡೆದ ಸಾಲವನ್ನು ಮರುಪಾವತಿಸದೆ ನೀಡಿದ ಚೆಕ್ ಅಮಾನ್ಯಗೊಂಡ ಪ್ರಕರಣದಲ್ಲಿ ಇಬ್ಬರು ಸಾಲಗಾರರಿಗೆ ಉಡುಪಿ ಜಿಲ್ಲಾ ಪ್ರಥಮ ದರ್ಜೆ ಹಿರಿಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ದೀಪಕ್ ಡಿ. ಶೆಣೈ ಅವರು 2021ರ ಮಾರ್ಚ್ 12ರಂದು ಮಲ್ಪೆ ಶಾಖೆಯಿಂದ ಪಡೆದಿದ್ದ 2 ಲಕ್ಷ ರೂ. ಸಾಲವನ್ನು ಮರುಪಾವತಿಸದ ಹಿನ್ನೆಲೆಯಲ್ಲಿ, 3 ಲಕ್ಷ ರೂ. ಮರುಪಾವತಿಸುವಂತೆ ಹಾಗೂ 5 ಸಾವಿರ ರೂ. ದಂಡ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಇದೇ ರೀತಿ ಪ್ರಸಾದ್ ಕುಲಾಲ್ ಅವರು 2021ರ ಅಕ್ಟೋಬರ್ 13ರಂದು ಪಡೆದಿದ್ದ 2 ಲಕ್ಷ ರೂ. ಸಾಲದ ಪ್ರಕರಣದಲ್ಲಿ, 3.25 ಲಕ್ಷ ರೂ. ಮರುಪಾವತಿ ಮತ್ತು 5 ಸಾವಿರ ರೂ. ದಂಡ ವಿಧಿಸಲಾಗಿದೆ. ಇದಲ್ಲದೆ, ಆರೋಪಿಗಳು ಬ್ಯಾಂಕಿಗೆ ವಂಚನೆ ಎಸಗುವುದರ ಜೊತೆಗೆ ಇತರ ಸಾಲಗಾರರಿಗೂ ಸಾಲ ಮರುಪಾವತಿಸದಂತೆ ತಪ್ಪು ಮಾಹಿತಿ ನೀಡುತ್ತಿದ್ದರು ಎಂದು ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

