Breaking News

ರೈತ ದೇಶದ ಬೆನ್ನೆಲುಬು, ಅವರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧ: ಪ್ರಧಾನಿ ಮೋದಿ

ನವದೆಹಲಿ : ಯುವ ಸಮೂಹವನ್ನು ಕೇಂದ್ರೀಕರಿಸಿ ಕೇಂದ್ರ ಸರ್ಕಾರದಿಂದ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದ್ದು, ಭಾರತ ಜಗತ್ತಿನ 5 ನೇ ಅತಿ ದೊಡ್ಡ ಅರ್ಥ ವ್ಯವಸ್ಥೆ ಇರುವ ದೇಶ ಎಂಬ ಹೆಗ್ಗಳಿಕೆಗಳಿಸಿದೆ ಎಂದು ಪಿಎಂ ಮೋದಿ ಹೇಳಿದ್ದಾರೆ.
ಆತ್ಮನಿರ್ಭರ್ ಭಾರತ ಅಭಿಯಾನ , ಮೇಕ್ ಇನ್ ಇಂಡಿಯಾ ,ಸ್ಟಾರ್ಟ್ ಅಪ್ ಇಂಡಿಯಾ , ಡಿಜಿಟಲ್ ಇಂಡಿಯಾ , ಸ್ಟ್ಯಾಂಡ್ ಅಪ್ ಇಂಡಿಯಾ ಸೇರಿದಂತೆ ಅನೇಕ ಯೋಜನೆಗಳನ್ನು ದೇಶವಾಸಿಗಳಿಗೆ ನಮ್ಮ ಸರ್ಕಾರ ಬಳುವಳಿಯಾಗಿ ಕೊಟ್ಟಿದೆ.
ಇದರಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಬಣ್ಣಿಸಿದರು.
ಭಾರತದ ಸರ್ವಾಂಗೀಣ ಅಭಿವೃದ್ಧಿ ಆಗಿದೆ. ಸ್ಪೇಸ್ ಸೆಕ್ಟರ್ , ಆರ್ಗಾನಿಕ್ ಫಾರ್ಮಿಂಗ್ , ಮೊಬೈಲ್ ತಯಾರಿಕೆ ವಲಯದಲ್ಲಿ ಭಾರತ ಯಶಸ್ಸಿನ ಕಡೆಗೆ ದಾಪುಗಾಲಿಡುತ್ತಿದೆ. ಹಿಂದೆಂದಿಗಿಂತಲೂ ವೇಗವಾಗಿ ಭಾರತ ಬೆಳೆಯುತ್ತಿದೆ ಎಂದು ಮೋದಿ ತಿಳಿಸಿದರು.
ರೈತ ದೇಶದ ಬೆನ್ನೆಲುಬು. ರಾಷ್ಟ್ರೀಯ ರೈತ ದಿನಾಚರಣೆ ಆಚರಣೆ ಮಾಡ್ತಿದ್ದೇವೆ, ಮಾಜಿ ಪಿಎಂ ಚೌಧರಿ ಚರಣ್ ಸಿಂಗ್ ಜನ್ಮದಿಂದ ಅಂಗವಾಗಿ ದೇಶದೆಲ್ಲೆಡೆ ಇದನ್ನು ಆಚರಿಸಲಾಗುತ್ತಿದೆ. ರೈತರ ಅಭಿವೃದ್ಧಿಗೆ ಕೇಂದ್ರ ಬದ್ಧ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಸ್ವಯಂ ಉದ್ಯೋಗ , ಸ್ವಾವಲಂಬಿ ಬದುಕನ್ನ ಜನರಿಗೆ ಕಲ್ಪಿಸಬೇಕಾಗಿದೆ. ಇದೇ ನಮ್ಮ ದೃಢ ಸಂಕಲ್ಪ. ಈ ನಿಟ್ಟಿನಲ್ಲಿ ಹಲವು ಮಹತ್ವದ ಘೋಷಣೆ ಮಾಡಲಾಗುತ್ತದೆ ಎಂದು ಮೋದಿ ಭರವಸೆ ನೀಡಿದರು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *