ಧಾರವಾಡ: ಸವದತ್ತಿ ರಸ್ತೆಯಲ್ಲಿ ನಡೆದಿದ್ದ ಮಹಿಳೆಯ ಸಾವು ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾಳೆ ಎಂದು ಆರಂಭದಲ್ಲಿ ಭಾವಿಸಲಾಗಿದ್ದ ಪ್ರಕರಣ ಇದೀಗ ಸುಫಾರಿ ಹತ್ಯೆ ಎಂಬುದಾಗಿ ಬಹಿರಂಗವಾಗಿದೆ..
Dharwad ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶಿವಾನಂದ ಕಮತಗಿ ನೇತೃತ್ವದ ತಂಡ ಚಾಣಾಕ್ಷತನದಿಂದ ತನಿಖೆ ನಡೆಸಿ ನಿಜಾಂಶವನ್ನು ಹೊರತಂದಿದೆ.
ಏನಿದು ಪ್ರಕರಣ.?
ಕಳೆದ ಕೆಲವು ದಿನಗಳ ಹಿಂದೆ ಲಲಿತಾ ಹಕ್ಕರಕಿ ಎಂಬ ಮಹಿಳೆ ಸವದತ್ತಿ ರಸ್ತೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಮೊದಲಿಗೆ ಇದು ರಸ್ತೆ ಅಪಘಾತ ಎಂದು ಶಂಕಿಸಲಾಗಿತ್ತು. ಆದರೆ, ಸ್ಥಳ ಪರಿಶೀಲನೆ, ಸಿಸಿಟಿವಿ ದೃಶ್ಯಗಳು ಮತ್ತು ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ಪೊಲೀಸರು ಆಳವಾದ ತನಿಖೆ ನಡೆಸಿದರು.
ತನಿಖೆಯಲ್ಲಿ ಬಹಿರಂಗ..

ತನಿಖೆಯಲ್ಲಿ ಮಹಿಳೆಯ ಗಂಡನೇ ಲಕ್ಷಾಂತರ ರೂಪಾಯಿ ನೀಡಿ ಸುಫಾರಿ ಹತ್ಯೆ ಮಾಡಿಸಿದ್ದಾನೆ ಎಂಬುದು ತಿಳಿದುಬಂದಿದೆ. ಬೆಳಗಾವಿ ಭಾಗದ ಆರೋಪಿಗಳನ್ನು ಸಂಪರ್ಕಿಸಿ ಪೂರ್ವಯೋಜಿತವಾಗಿ ಅಪಘಾತದ ರೂಪದಲ್ಲಿ ಕೊಲೆ ನಡೆಸಲಾಗಿದೆ ಎನ್ನಲಾಗಿದೆ.
ಅಧಿಕಾರಿಗಳ ಹೇಳಿಕೆ..
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ Gunjan Arya ಸಮಗ್ರ ಮಾಹಿತಿ ನೀಡಲಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

