Breaking News

ತಿಪಟೂರು: ಕೊಲೆ ಆರೋಪಿ ಬಂಧನ

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಕೋಡಿಹಳ್ಳಿ ಬೋವಿ ಕಾಲೊನಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿ ಬೀರೂರಿನ ಕಬಾಬ್ ವ್ಯಾಪಾರಿ ಶಫಿಉಲ್ಲಾನನ್ನು ಪೊಲೀಸರು ಬಂಧಿಸಿದ್ದಾರೆ. ಬೀರೂರಿನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಪುಟ್ಟರಾಜು ಎಂಬುವವರನ್ನು ಶಫಿಉಲ್ಲಾ ತಲೆ ಕತ್ತರಿಸಿ ಕೊಲೆ ಮಾಡಿದ್ದ.ಪುಟ್ಟರಾಜು ಲೇವಾದೇವಿ ವ್ಯವಹಾರವನ್ನೂ ಮಾಡುತ್ತಿದ್ದು, ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಇತ್ತು. ಶಫಿಉಲ್ಲಾ ತಾಲ್ಲೂಕಿನ ಹೊನ್ನವಳ್ಳಿ ಬ್ಯಾಂಕ್‌ನಲ್ಲಿ ಒಡವೆಗಳನ್ನು ಅಡವಿಟ್ಟಿದ್ದು, ಅದನ್ನು ಬಿಡಿಸಿಕೊಳ್ಳಲೆಂದು ಇಬ್ಬರೂ ಬೀರೂರಿನಿಂದ ಜೊತೆಯಾಗಿ ಬಂದಿದ್ದರು. ಮಾರ್ಗಮಧ್ಯೆ ಶಫಿಉಲ್ಲಾ ತೋಟದ ಕೆಲಸಕ್ಕೆ ಎಂದು ಪುಟ್ಟರಾಜು ಬಳಿ ಹೇಳಿ ಮಾರಕಾಸ್ತ್ರಗಳನ್ನು ಖರೀದಿಸಿದ್ದ. ಬೋವಿ ಕಾಲೊನಿ ಸಮೀಪ ಮೂತ್ರ ವಿಸರ್ಜನೆಗಾಗಿ ದ್ವಿಚಕ್ರ ವಾಹನ ನಿಲ್ಲಿಸಿದ್ದ ವೇಳೆ, ಮಾರಕಾಸ್ತ್ರದಿಂದ ಪುಟ್ಟರಾಜು ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *