Breaking News

ಕಾರಲ್ಲಿದ್ದ ನವ ದಂಪತಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿದವರನ್ನು ಹೆಡೆಮುರಿ ಕಟ್ಟಿದ ಗ್ರಾಮೀಣ ಪೊಲೀಸರು!

ಹುಬ್ಬಳ್ಳಿ: ಖಾಲಿ ಸೈಟ್ ಬಳಿ ಇಬ್ಬರು ಗಂಡ ಹೆಂಡತಿ ಕಾರಲ್ಲಿ ಮಾತನಾಡುತ್ತಿರುವಾಗ, ಇಬ್ಬರು ಖದೀಮರು ಬಂದು ನವ ದಂಪತಿಗೆ ಚಾಕು ತೋರಿಸಿ, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಂಗಾರ ಚೈನ್ ಮತ್ತು ಹಣ ಸುಲಿಗೆ ಮಾಡಿಕೊಂಡು ಹೋಗಿದ್ದರು. ಈ ಪ್ರಕರಣವನ್ನು ಬೆನ್ನು ಹತ್ತಿದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಹೌದು,,, ಹುಬ್ಬಳ್ಳಿ ತಾಲ್ಲೂಕಿನ ರೇವಡಿಹಾಳ ಗ್ರಾಮದ ಖಾಲಿ ಸೈಟ್ ಬಳಿ ನವ ದಂಪತಿ ಕಾರಲ್ಲಿ ಕುಳಿತು ಮಾತನಾಡುತ್ತಿದ್ದರು. ಇಬ್ಬರು ಕುಡಿದ ಅಮಲಿನಲ್ಲಿ ಬಂದು ಕಾರಲ್ಲಿದ್ದ ಗಂಡ ಹೆಂಡತಿಗೆ ಚಾಕು ತೋರಿಸಿ ಕೊರಳಲ್ಲಿದ್ದ 30 ಗ್ರಾಮ ಬಂಗಾರದ ಚೈನ್, ಮತ್ತು 4,500 ರೂ. ಹಣವನ್ನಯ ಸುಲಿಗೆ ಮಾಡಿಕೊಂಡು ಹೋಗಿದ್ದರು. ಭಯಗೊಂಡ ದಂಪತಿ ಹುಬ್ಬಳ್ಳಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿ, ಬಂಗಾರದ ಚೈನ್ ಮತ್ತು ಹಣ, ಒಂದು ವಾಹನವನ್ನು ಜಪ್ತಿ ಮಾಡಿದ್ದಾರೆ. ಇನ್ಸ್ಪೆಕ್ಟರ್ ಟೀಮ್ ಕಾರ್ಯಕ್ಕೆ ಧಾರವಾಡ ಎಸ್.ಪಿ ಗುಂಜನ್ ಆರ್ಯ, ಡಿಎಸ್‌ಪಿ ವಿನೋಧ ಮುಕ್ತೆದಾರ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *