Breaking News

ಜಾತಿನಿಂದನೆ ಆರೋಪ: ನಾಲ್ವರ ವಿರುದ್ಧ ಪ್ರಕರಣ

ಯಾದಗಿರಿ: ತಕರಾರಿರುವ ನಿವೇಶನಕ್ಕೆ ಸಂಬಂಧಿಸಿ ಗ್ರಾಮ ಪಂಚಾಯಿತಿ ಸಿಬ್ಬಂದಿಯಿಂದ ಅಳತೆಗೆ ಕಾರ್ಯದ ವೇಳೆ ಜಾತಿ ನಿಂದನೆ ಮತ್ತು ಹಲ್ಲೆ ನಡೆಸಿದ ಆರೋಪದಡಿ ಕೆಂಬಾವಿ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಸುರಪುರ ತಾಲ್ಲೂಕಿನ ಕರಡಕಲ್‌ ಗ್ರಾಮದ ಭೀಮಣ್ಣ ಅಂಬಿಗೇರ, ಸಿದ್ದಪ್ಪ ಅಂಬಿಗೇರ, ಅಂಬಮ್ಮ ಅಂಬಿಗೇರ ಮತ್ತು ದೇವಪ್ಪ ಅಂಬಿಗೇರ ವಿರುದ್ಧ ಪ್ರಕರಣ ದಾಖಲಾಗಿದೆ. ಕರಡಕಲ್‌ ಗ್ರಾಮದ ರೇಣುಕಮ್ಮ ಗುಡಕಲ್‌ ಅವರ ಜಾಗದ ಕುರಿತ ತಕ‍ರಾರಿತ್ತು. ತಕರಾರಿರುವ ನಿವೇಶನವನ್ನು ಫೆ.23 ರಂದು ಅಳತೆ ಮಾಡಲು ಗ್ರಾಮ ಪಂಚಾಯಿಸಿ ಸಿಬ್ಬಂದಿ ಬಂದಿದ್ದರು. ಆ ವೇಳೆ ರೇಣುಕಮ್ಮ ಅವರು ತಮ್ಮೊಡನೆ ಸಂಗಪ್ಪ ಗುಡಿಮನಿ ಅವರನ್ನು ಕರೆದೊಯ್ದಿದ್ದಾರೆ. ಆ ವೇಳೆ ಆರೋಪಿಗಳು ‘ನನ್ನ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ’ ಎಂದು ಸಂಗಪ್ಲ ಗುಡಿಮನಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ್ದಾಗಿ ಪೊಲೀಸ್‌ ಇಲಾಖೆ ತಿಳಿಸಿದೆ.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *