Breaking News

ಅಂಗನವಾಡಿ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ….

ಕುಂದಗೋಳ : ಮತಕ್ಷೇತ್ರದ ಕೊಂಕಣಕುರಹಟ್ಟಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 10 ಲಕ್ಷ ರೂಪಾಯಿ ಅನುದಾನದ ಅಡಿ ಅಂಗನವಾಡಿ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ಎಂ.ಇ‌.ಪಾಟೀಲ್ ನೆರವೇರಿಸಿದರು.

ನಂತರ ಚಾಕಲಬ್ಬಿ ಗ್ರಾಮದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರ ಪ್ರಸ್ತಾವನೆಯ ಮೇರೆಗೆ ಖಾಸಗಿ ಕಂಪನಿಯ ಸಿ.ಎಸ್.ಆರ್ ಅನುದಾನದ 40 ಲಕ್ಷ ರೂಪಾಯಿ ವೆಚ್ಚದಲ್ಲಿ 3 ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.

ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲಾ ಡೆಸ್ಕ್, ಸ್ಮಾರ್ಟ್ ಕ್ಲಾಸ್, ಶೌಚಾಲಯ ಹೀಗೆ ಹತ್ತು ಹಲವಾರು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುತ್ತಿರುವ ನಮ್ಮ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದಗಳನ್ನು ತಿಳಿಸಿದರು

Share News

About BigTv News

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *