ಕಡಬ:ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ದಾಳಿ ನಡೆಸಿದ ಘಟನೆ ಕಡಬ ತಾಲೂಕಿನ ಯೇನೆಕಲ್ಲು ಗ್ರಾಮದಲ್ಲಿ ನಡೆದಿದೆ. ಮಾರ್ಚ್ 6ರಂದು ಸಂಜೆ, ಯೇನೆಕಲ್ಲು ಗ್ರಾಮದ ಸಂಕಡ್ಕ ಎಂಬಲ್ಲಿ ತೋಟವೊಂದರಲ್ಲಿ ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಯುತ್ತಿದೆ ಎಂಬ ಎಂಬ ಖಚಿತ ಮಾಹಿತಿ ಮೇರೆಗೆ ಸುಬ್ರಹ್ಮಣ್ಯ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿದ್ದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ದಾಳಿ ಸಂದರ್ಭ ಸ್ಥಳದಲ್ಲಿ 2 ಕೋಳಿಗಳು ಪತ್ತೆಯಾಗಿದ್ದು, ಇವುಗಳ ಪೈಕಿ ಒಂದು ಕೋಳಿಯ ಕಾಲಿಗೆ ಅಂಕಕ್ಕೆ ಬಳಸುವ ಕತ್ತಿಯನ್ನು ಕಟ್ಟಲಾಗಿತ್ತು. ಪೊಲೀಸರು ಇವುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

