ಶಿವಮೊಗ್ಗ: ನಗರದ ವಿವಿಧ ಶಾದಿಮಹಲ್ ಗಳಲ್ಲಿ ಮದುವೆಯ ಸಮಯದಲ್ಲಿ ಆಭರಣ, ನಗದನ್ನು ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ಸೂಳೆಬೈಲ್ ವಾಸಿ ರುಕ್ಸಾರ್ ಫಿರ್ದೋಸ್ (30) ಬಂಧಿತೆ. ತುಂಗಾನಗರ ಪೊಲೀಸ್ ಠಾಣೆಯ 4 ಪ್ರಕರಣಗಳಲ್ಲಿ 18 ಲಕ್ಷ ರೂ.ಅಂದಾಜು ಮೌಲ್ಯದ 120 ಗ್ರಾಂ ಬಂಗಾರದ ಆಭರಣಗಳನ್ನು ಈಕೆಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿವೈಎಸ್ಪಿ ಬಾಬು ಅಂಜನಪ್ಪ, ತುಂಗಾನಗರ ಇನ್ಸ್‌ಪೆಕ್ಟರ್ ಕೆ.ಟಿ ಗುರುರಾಜ್, ಎಸ್ ಐ ಗಾದಿಲಿಂಗಪ್ಪ ಗೌಡರ್ ನೇತೃತ್ವದ ತಂಡ ಕಳ್ಳಿಯನ್ನು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

