Breaking News

ಕೊಪ್ಪಳ: ಬಾಲಕನನ್ನು ಅಪಹರಿಸಿ ಕೊಂದ ಅಪರಾಧಿಗೆ ಜೀವಾವಧಿ ಶಿಕ್ಷೆ

ಬಾಲಕನನ್ನು ಅಪಹರಿಸಿ ಕೊಲೆ ಮಾಡಿ ತಾಲ್ಲೂಕಿನ ಹಲಗೇರಿ ಸೀಮೆಯ ವ್ಯಾಪ್ತಿಯ ಹಳ್ಳದಲ್ಲಿ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಸಷೆನ್ಸ್‌ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಹಾಗೂ ₹70 ಸಾವಿರ ದಂಡ ವಿಧಿಸಿ ಆದೇಶಿಸಿದೆ. 2020ರ ಜುಲೈನಲ್ಲಿ ಲಕ್ಷ್ಮವ್ವ ಬುರ್ಲಿ ಎಂಬುವರ ಮಗನನ್ನು ತಳಕಲ್‌ನ ಅಪರಾಧಿ ಅಣ್ಣಪ್ಪ ಎಂಬಾತ ಅಪ‍ಹರಿಸಿಕೊಂಡು ಹೋಗಿದ್ದ.ಈ ಕುರಿತು ಕುಕನೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಆಗ ಆರೋಪಿಯಾಗಿದ್ದ ಅಣ್ಣಪ್ಪನನ್ನು ಭಾನಾಪುರ ಬಳಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾಗ ಕೊಲೆ ಮಾಡಿ ಹೊಲದಲ್ಲಿ ಹೂತಿಟ್ಟಿರುವ ವಿಚಾರ ಬಾಯಿಬಿಟ್ಟಿದ್ದ. ಈ ಕುರಿತು ಆಗಿನ ಯಲಬುರ್ಗಾ ಸಿಪಿಐ ಎಂ. ನಾಗಿರೆಡ್ಡಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅಪರ್ಣಾ ಬಂಡಿ ವಾದ ಮಂಡಿಸಿದ್ದರು.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *