Breaking News

ಪುಣೆಯ ಪ್ರತಿಷ್ಠಿತ ’ಫ್ಯೂಯಲ್’ನಿಂದ ಮ್ಯಾನೇಜ್‌ಮೆಂಟ್ ಕೋರ್ಸ್

ಹುಬ್ಬಳ್ಳಿ: ಮಹಾರಾಷ್ಟ್ರದ ಪುಣೆಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ಫ್ಯೂಯಲ್ ಬಿಸಿನೆಸ್ ಸ್ಕೂಲ್ ( ಫ್ರೆಂಡ್ಸ್ ಯೂನಿಯನ್ ಫಾರ್ ಎನರ್ಜೆಸಿಂಗ್ ಲೈವ್ಸ್ ) ವತಿಯಿಂದ ಪೋಸ್ಟ್ ಗ್ಯಾಜ್ಯುಯೇಟ್ ಡಿಪ್ಲೋಮಾ ಇನ್ ಮ್ಯಾನೇಜಮೆಂಟ್ ಕೋರ್ಸ್‍ಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಮುಖ್ಯ ಮಾರ್ಗದರ್ಶಕ ಸಂತೋಷ ಹುರಳಿಕೊಪ್ಪಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಕೋರ್ಸ್‍ಗಳಿಗೆ ಪ್ರವೇಶ ಪಡೆಯುವ 60 ಅರ್ಹ ವಿದ್ಯಾರ್ಥಿನಿಯರಿಗೆ 100% ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ , ಪಿಜಿಡಿಎಂ ಕೋರ್ಸ್‍ನಲ್ಲಿ 120 ವಿದ್ಯಾರ್ಥಿಗಳು ಸೇರಿದ್ದಾರೆ, ಇದರಲ್ಲಿ 60 ವಿದ್ಯಾರ್ಥಿಯರನ್ನು ಒರಾಕಲ್ ಕಂಪನಿಯಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ಕಾರ್ಯಕ್ರಮದಡಿಯಲ್ಲಿ 100% ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ ಎಂದು ಹೇಳಿದರು.

ಎರಡು ವರ್ಷದ ಕೋರ್ಸ್‍ಗೆ ಪ್ರತಿ ವಿದ್ಯಾರ್ಥಿಗೆ ಸುಮಾರು ಎಂಟು ಲಕ್ಷ ರೂ. ‘ಸಿಎಸ್‍ಆರ್ ಇಂಪ್ಯಾಕ್ಟ್ ಸ್ಕಾಲರ್‍ಶಿಪ್’ ಅಡಿಯಲ್ಲಿ ಆಯ್ಕೆಯಾದವರಿಗೆ ಉಚಿತ ಕಾಲೇಜು, ವಸತಿ ಮತ್ತು ಪುಸ್ತಕಗಳು ಸಿಗುತ್ತವೆ. ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಆಗಸ್ಟ್ 15ರೊಳಗೆ ಕೋರ್ಸ್ ಗೆ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.

ಸಂಸ್ಥೆಯು ಮೂರು ವರ್ಷಗಳ ಬಿಬಿಎ ಕೋರ್ಸ್ ಅನ್ನು ಸಹ ನೀಡಲಾಗುತ್ತಿದ್ದು, ಈ ವಿದ್ಯಾರ್ಥಿ 160 ಸೀಟುಗಳು ಲಭ್ಯವಿವೆ. ವಿದ್ಯಾರ್ಥಿಗಳಿಗೆ ಕೆಲವು ಕಾರ್ಪೊರೇಟ್ ಕಂಪನಿಗಳೊಂದಿಗೆ ಸ್ಕಾಲರ್‍ಶಿಪ್ ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.

2007ರಲ್ಲಿ ಜೆಬಿಎಸ್ ಆಪ್ ಕೇಬ್ರಿಡ್ಜ್ ಫೆಲೋ ಮತ್ತು ಅಶೋಕ ಫೆಲೋ ಕೇತನ್ ದೇಶಪಾಂಡೆ ಅವರು ಈ ಶಿಕ್ಷಣ ಸಂಸ್ಥೆಯನ್ನು ಸಂಸ್ಥಾಪಿಸಿದರು. ಫ್ಯೂಯಲ್ ಸಾಮಾಜಿಕ ಸಂಸ್ಥೆಗಳು ಭಾರತ ಮತ್ತು ಜಾಗತಿಕವಾಗಿ ವಿವಿಧ ಸಿಎಸ್‍ಆರ್ ಕಾರ್ಯಕ್ರಮಗಳಡಿಯಲ್ಲಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ದಿ ಉಪಕ್ರಮಗಳ ಮೂಲಕ 1.2 ಮೀಲಿಯನ್ ಯುವ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಭವಿಷ್ಯದ ಜೀವನವನ್ನು ಧನಾತ್ಮಗೊಳಿಸಿದೆ ಎಂದರು. ಫ್ಯೂಯಲ್ ಬಿಜಿನೆಸ್ ಸ್ಕೂಲ್‍ನಲ್ಲಿ ಭವಿಷ್ಯದ ಮಹಿಳಾ ನಾಯಕರನ್ನು ಸಬಲಿಕರಣಗೊಳಿಸುವದು ನಮ್ಮ ಪ್ರಮುಖ ಗುರಿಯಾಗಿದೆ. ಸಿಎಸ್‍ಆರ್ ವಿದ್ಯಾರ್ಥಿ ವೇತನಗಳ ಮೂಲಕ ಸಂಶಕ್ತ ಮತ್ತು ಸಮರ್ಥ ಮಹಿಳೆಯರ ಪೀಳೆಗೆಯನ್ನು ಬೆಳೆಸುತ್ತೇವೆ ಎಂದರು. ಹುಬ್ಬಳ್ಳಿಯಲ್ಲೂ ಸಹ ನಮ್ಮ ಕೌಶಲಾಭಿವೃದ್ದಿ ಕೇಂದ್ರವಿದ್ದು ಈಗಾಗಲೇ ಲಕ್ಷಾಂತರ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕೌಶಲಾಭಿವೃದ್ದಿ ತರಬೇತಿ ನೀಡಲಾಗಿದೆ, ಇದರ ಸದುಪಯೋಗ ಪಡೆದು ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ವೇತನದ ಉದ್ಯೋಗ ಪಡೆದು ಸಂತೃಪ್ತ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಸಂಸ್ಥೆಯ ಸಲಹೆಗಾರರಾದ ಪಲ್ಲವಿ ಹುರಳಿಕೊಪ್ಪಿ, ಕರ್ನಲ್ ವಿವೇಕ ಪತ್ರಿಕಾಗೋಷ್ಠಿಯಲ್ಲಿದ್ದರು.

Share News

About BigTv News

Check Also

10 ದಿನಗಳಲ್ಲಿ ನ್ಯಾಯ ಸಿಗದಿದ್ದರೆ ಸಲ್ಲೇಖನ ವ್ರತ! ಸರ್ಕಾರಕ್ಕೆ ಗುಣಧರನಂದಿ ಸ್ವಾಮೀಜಿಗಳ ಕೊನೆಯ ಎಚ್ಚರಿಕೆ…

ಜೈನ ನಿಗಮ ಮಂಡಳಿ ಸ್ಥಾಪನೆಗೆ ಆಗ್ರಹ: ಚಿಕ್ಕೋಡಿಯಿಂದ ಸುವರ್ಣಸೌಧದವರೆಗೆ ಪಾದಯಾತ್ರೆ ಘೋಷಣೆ! ಜೈನ ಸಮುದಾಯದ ಬೇಡಿಕೆ ಈಡೇರದಿದ್ದರೆ ಸಲ್ಲೇಖನ ವ್ರತದ …

Leave a Reply

Your email address will not be published. Required fields are marked *