ಹುಬ್ಬಳ್ಳಿ: ಬಹಳ ದಿನಗಳಿಂದ ಜಾಗದ ಮಾಲೀಕರು ಮತ್ತು ಲೀಸ್ ಪಡೆದ ಜಾಗದಲ್ಲಿದ್ದ ನಿವಾಸಿಗಳ ನಡುವೆ ನಡೆದಿದ್ದ ತಿಕ್ಕಾಟಕ್ಕೆ ಹೈಕೋರ್ಟ್ ಅಂತ್ಯ ಹಾಡಿದ್ದು, ಈ ಮೂಲಕ ಲೀಸ್ನಲ್ಲಿದ್ದ ಜನರಿಗೆ ಮನೆ ಖಾಲಿ ಮಾಡುವಂತೆ ಸೂಚಿಸಿದೆ. ಇದರಿಂದ ಸುಮಾರು ವರ್ಷಗಳ ಪ್ರಕರಣಕ್ಕೆ ತಾತ್ಕಾಲಿಕ ಅಂತ್ಯ ಸಿಕ್ಕಂತಾಗಿದ್ದು, ಇಂದು ಎಲ್ಲಾ ಮನೆ ಖಾಲಿ ಮಾಡಿಸಲಾಗಿದೆ.ನಗರದ ಹೊಸೂರು ಸರ್ಕಲ್ ಬಳಿಯ ಆರ್.ಬಿ.ಕುಲಕರ್ಣಿ ಚಾಳದ ವಿವಾದ ತಾತ್ಕಾಲಿಕವಾಗಿ ಅಂತ್ಯ ಕಂಡಿದೆ. ಈ ಹಿಂದೆ ಕುಲಕರ್ಣಿ ಎಂಬುವರು ಲೀಸ್ ಪಡೆದಿದ್ದ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿಕೊಂಡು ತೆರವಿಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಜಾಗದ ಮಾಲೀಕ ಮನೆ ತೆರವುಗೊಳಿಸಿ ಜಾಗ ನೀಡಬೇಕೆಂದು 1971ರಲ್ಲಿಯೇ ಕೋರ್ಟ್ ಮೊರೆ ಹೋಗಿದ್ದರು.
ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೀಸ್ದಾರರು ಮೇಲ್ಮನವಿ ಸಲ್ಲಿಸುತ್ತಾ ಬಂದಿದ್ದರು. ಆದರೆ ಇದಕ್ಕೆ ಹೈಕೋರ್ಟ್ ದ್ವಿಸದಸ್ಯ ಪೀಠ ಆದೇಶ ಹೊರಡಿಸಿ ಅಂತ್ಯ ಹಾಡಿದ್ದು, ಅಂತಿಮವಾಗಿ ಜಾಗವನ್ನು ಮಾಲೀಕರಿಗೆ ನೀಡುವಂತೆ ತಿಳಿಸಿದೆ. ಅದರಂತೆ ಇಂದು ಕುಲಕರ್ಣಿ ಚಾಳದಲ್ಲಿ ನಿರ್ಮಿಸಲಾಗಿದ್ದ 57 ಮನೆಗಳನ್ನು ಬಂದೋಬಸ್ತ್ ನಡುವೆ ತೆರವುಗೊಳಿಸಲಾಯಿತು.
ಇನ್ನು ಕೋರ್ಟ್ನ ಆದೇಶ ಪಾಲಿಸಲೇಬೇಕಾದರಿಂದ ಸುಮಾರು ವರ್ಷಗಳಿಂದ ಕುಲಕರ್ಣಿ ಚಾಳದಲ್ಲಿ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದ 52 ಕುಟುಂಬಗಳು ಬೀದಿಗೆ ಬಂದಿದ್ದು, ಮನೆ ಸ್ಥಳಾಂತರ ಮಾಡಲು ಸಮಯ ಬೇಕೆಂದು ಪಟ್ಟು ಹಿಡಿದಿರು. ಆದರೆ ಈ ವೇಳೆ ಅಧಿಕಾರಿಗಳು ಮತ್ತು ಬಾಡಿಗೆದಾರರಿಗೆ ಈ ಹಿಂದೆಯೇ ಕಾಲಾವಕಾಶ ನೀಡಲಾಗಿದ್ದರಿಂದ ಸರ್ಕಾರಿ ವಕೀಲರು ಮಧ್ಯ ಪ್ರವೇಶ ಮಾಡಿ ಕೋರ್ಟ್ ಆದೇಶ ಬಗ್ಗೆ ಮನವರಿಕೆ ಮಾಡಿಕೊಟ್ಟು ಮನೆಯಲ್ಲಿದ್ದ ವಸ್ತುಗಳನ್ನು ಹೊರಗೆ ಹಾಕಿ, ಮನೆ ತೆರವುಗೊಳಿಸಿದರು. .
bigtvnews | Hubli Dharwad News | Kannada News | Karnataka News Hubli News | News In Hubli | Local news





