Breaking News

ಗ್ರಾಹಕನ ಮೇಲೆ ಹಲ್ಲೆ: ಡೆಲಿವರಿ ಬಾಯ್‌ ಬಂಧನ

ಬೆಂಗಳೂರು: ಗ್ರಾಹಕನ ಮೇಲೆ ಹಲ್ಲೆ ಮಾಡಿದಆರೋಪದಡಿ ಡೆಲಿವರಿ ಬಾಯ್‌ ಒಬ್ಬನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾಗಿದ್ದ ಖಾಸಗಿ ಕಂಪನಿ ಉದ್ಯೋಗಿ ಪಾಲ್‌ ನೀಡಿದ ದೂರಿನನ್ವ ಧನುಷ್‌ (23) ಎಂಬಾತನನ್ನು ಬಂಧಿಸಲಾಗಿದೆ. ದೂರುದಾರರಾದ ಪಾಲ್‌ ಆನ್‌ಲೈನ್‌ ಮೂಲಕ ತಿಂಡಿ ಆರ್ಡರ್‌ ಮಾಡಿದ್ದರು. ಆರೋಪಿ ಕೋರಮಂಗಲದ 8 ಬ್ಲಾಕ್‌ನಲ್ಲಿರುವ ಅಪಾರ್ಟ್‌ ಮೆಂಟ್‌ಗೆ ಆರ್ಡರ್‌ ತೆಗೆದುಕೊಂಡು ಬಂದಿದ್ದ. ಪಾಲ್‌ ಅವರು 2ನೇ ಮಹಡಿಯಲ್ಲಿ ವಾಸಿಸುತ್ತಿದ್ದು, ಆದರೆ, ಧನುಷ್‌ ಅಪಾರ್ಟ್‌ಮೆಂಟ್‌ನ 4ನೇ ಮಹಡಿಗೆ ಹೋಗಿ ನಂತರ ಪಾಲ್‌ ಅವರಿಗೆ ಕರೆ ಮಾಡಿದ್ದ. ಪಾಲ್‌ 2ನೇ ಮಹಡಿಯಲ್ಲಿರುವ ತನ್ನ ಫ್ಲ್ಯಾಟ್‌ಗೆ ಬರಲು ಹೇಳಿದ್ದರು. ವಿಳಾಸವನ್ನು ಸರಿಯಾಗಿ ಕಳುಹಿಸದ ಕಾರಣಕ್ಕೆ ಆರೋಪಿ ಪಾಲ್‌ನನ್ನು ನಿಂದಿಸಿದ್ದ ಎನ್ನಲಾಗಿದೆ. ಈ ವೇಳೆ ವಾಗ್ವಾದ ನಡೆದು, ಅದು ವಿಕೋಪಕ್ಕೆ ಹೋದ್ದಾಗ ಧನುಷ್‌ ಪಾಲ್‌ನ ಮುಖಕ್ಕೆ ಹಲ್ಲೆ ಮಾಡಿದ್ದ. ಈ ಸಂಬಂಧ ಪಾಲ್‌ ದೂರು ದಾಖಲಿಸಿದ್ದರು.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *