ಹುಬ್ಬಳ್ಳಿ: ತಲ್ವಾರ್ ಹಿಡಿದು ಜೀವ ಬೆದರಿಕೆ ಹಾಕಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿಕೊಂಡ ಸ್ಥಳೀಯ ನಿವಾಸಿ ಸಂಪತ್ ಚವ್ಹಾಣ್ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯು ತಲ್ವಾರ್ ಹಿಡಿದು ‘ಜಗತ್ತಿನಲ್ಲಿ ರಕ್ತ ಹೀರುವವರು ಯಾರೇ ಆಗಲಿ, ಬದುಕಿರಬಾರದು’ ಎಂದು ವಿಡಿಯೊ ಮಾಡಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೆ ಮಾಡಿಕೊಂಡಿದ್ದು, ಜನರಲ್ಲಿ ಭಯ ಹಾಗೂ ಸಮಾಜದ ಶಾಂತಿ ಕದಡುವಂತೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

