ಕೈಯಲ್ಲಿ ದುಡ್ಡಿದ್ದರೆ ಏನು ಮಾಡಕ್ಕಾಗಲ್ಲ ಅಲ್ವಾ? ಇಲ್ಲೊಬ್ಬರು ಚಿನ್ನ ಹಾಗೂ ಪ್ಲಾಟಿನಂನಿಂದ ವಿವಾರ ನೌಕೆಯನ್ನು ತಯಾರಿಸಿದ್ದರೆ. ಈ ನೌಕೆಯನ್ನು ತಯಾರಿಸಲು 10,000 ಕೆಜಿ ಚಿನ್ನ ಬಳಸಿದ್ದಾರೆ, ಜೊತೆಗೆ ಪ್ಲಾಟಿನಂ ಕೂಡ ಬಳಸಿದ್ದಾರೆ ಇದರ ಬೆಲೆ ಎಷ್ಟಿದೆ ಎಂಬುವುದನ್ನು ನೀವೇ ಊಹಿಸಬಹುದು. ಇದು ಪ್ರಪಂಚದ ಅತ್ಯಂತ ದುಬಾರಿ ನೌಕೆಯಾಗಿದೆ. ಬ್ರಿಟನ್‌ನ ಗ್ಯಾಡ್ಜೆಟ್ ಗುರುಯಾಗಿರುವ ಸ್ಟುವರ್ಟ್ ಹ್ಯೂಸ್ ಐಪ್ಯಾಡ್ ತಯಾರಿಯಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ತಯಾರಿಸಿದ ನೌಕೆ ಇದಾಗಿದೆ. ಇದರ ಬೆಲೆ $4.8 ಬಿಲಿಯನ್ ಅಂದರೆ 4,00,19,78,40,000.00 ರುಪಾಯಿ ಮೌಲ್ಯದ ನೌಕೆ ಇದಾಗಿದೆ.
ಇದುವರೆಗೆ ಅನೇಕ ದುಬಾರಿ ನೌಕೆಗಳು ಬಂದಿವೆ, ಅವುಗಳಲ್ಲಿಯೇ ಅತಿ ದುಬಾರಿ ನೌಕೆ ಇದಾಗಿದೆ. ಇದನ್ನು ಮಲೇಷ್ಯಾದ ಶ್ರೀಮಂತ ವ್ಯಕ್ತಿಯೊಬ್ಬರು ಖರೀದಿಸಿದ್ದಾರೆ. ಅವರ ಹೆಸರು ರಾಬರ್ಟ್ ನಾಕ್. ಇದರಲ್ಲಿ 220,462 ಪೌಂಡ್‌ನಷ್ಟು ಅಮೂಲ್ಯ ಮೌಲ್ಯದ ಲೋಹಗಳನ್ನು ಬಳಸಿ ಈ ನೌಕೆ ತಯಾರಿಸಲಾಗಿದೆ. ಈ ನೌಕೆಯ ರೈಲ್ಸ್, ಡೈನಿಂಗ್ ಹಾಲ್, ಬೋಟ್ ಬೇಸ್ ಇವುಗಳನ್ನು ನಿರ್ಮಿಸಲು ಚಿನ್ನ ಬಳಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





