Breaking News

ಮೊಮ್ಮಗನ ಸಾವು; ಅನ್ನ-ನೀರು ಬಿಟ್ಟು ದುಃಖದಲ್ಲಿದ್ದ ಅಜ್ಜಿಯೂ ಸಾವು!!

ಆರ್‌ಸಿಬಿ ಜಯೋತ್ಸವದ ವೇಳೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈದಾಗಿ ಉಂಟಾದ ಜನಸಮುದಾಯದ ತೀವ್ರ ಕಾಲ್ತುಳಿತದಲ್ಲಿ ಯುವಕ ಮನೋಜ್ ಮೃತಪಟ್ಟಿದ್ದನು. ಈ ಸುದ್ದಿ ಮನೋಜ್‌ ಕುಟುಂಬವನ್ನು ಶೋಕಸಾಗರಕ್ಕೆ ಎಳೆದಿತ್ತು. ಮನೋಜ್‌ನ ಸಾವಿನ ಸುದ್ದಿ ಕೇವಲ ಕುಟುಂಬವನ್ನೇ ಅಲ್ಲ, ಇಡೀ ಊರನ್ನೇ ದುಃಖದಲ್ಲಿ ಮುಳುಗಿಸಿತ್ತು. ಅವನ ಅಜ್ಜಿ ದೇವಿರಮ್ಮ, ಮೊಮ್ಮಗನ ಮರಣ ಸುದ್ದಿ ಕೇಳಿದ ಬಳಿಕದಿಂದಲೇ ಊಟ ನೀರಿಗೂ ಕೈಹಾಕದೆ, ನಿರಂತರವಾಗಿ ನೋವಿನ ಶೋಕದಲ್ಲಿಯೇ ಮುಳುಗಿದ್ದರು. ತಾನು ಎತ್ತಿ ಆಡಿಸಿದ ಮೊಮ್ಮಗನ ಜೀವನ ಒಂದು ಸ್ಥಿತಿಗೆ ತಲುಪುವ ಮುನ್ನವೇ ದುರಂತ ಸಾವಿಗೀಡಾಗಿದ್ದಕ್ಕೆ ಭಾರೀ ನೊಂದುಕೊಂಡಿದ್ದರು.ಮೊಮ್ಮಗನ ಸಾವಿನ ಶೋಕದಿಂದ ಅಜ್ಜಿ ದೇವೀರಮ್ಮ ಊಟವನ್ನೂ ಬಿಟ್ಟಿದ್ದರಿಂದ ದೈಹಿಕವಾಗಿ ಕುಸಿದಿದ್ದರು. ಸೋಮವಾರ ಇಂದು ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Share News

About BigTv News

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *